55 ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಆದೇಶ ಪತ್ರ

HNL UDHYOGA MELA
Published on

ಹಾನಗಲ್ಲ: ಪಟ್ಟಣದ ಗುರುಭವನದಲ್ಲಿನ ಉದ್ಯೋಗ ಸಮೃದ್ಧಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 55 ಯುವಕ, ಯುವತಿಯರಿಗೆ ಸ್ಥಳದಲ್ಲೇ ಉದ್ಯೋಗದ ಆದೇಶ ಪತ್ರ ನೀಡಲಾಯಿತು.

ಶಾಸಕ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ತಾಲೂಕಿನ ಎಸ್ಸೆಸ್ಸೆಲ್ಸಿ ಪಾಸಾದ, ದ್ವಿತೀಯ ಪಿಯುಸಿ ಪಾಸ್/ಫೇಲ್, ಐಟಿಐ, ಡಿಪ್ಲೊಮಾ ಆದ 135 ಯುವಕ, ಯುವತಿಯರು ನೋಂದಣಿ ಮಾಡಿಕೊಂಡಿದ್ದರು. ಜಪಾನ್ ಮೂಲಕ ಎಂಎನ್​ಸಿ ಕಂಪನಿ ಯಜೂಕಿ ಇಂಡಿಯಾ ಪ್ರೈವೇಟ್ ಲಿ.ನ ಮುಖ್ಯಸ್ಥರು ಸಂದರ್ಶನ ಕೈಗೊಂಡು 55 ಯುವಕ, ಯುವತಿಯರಿಗೆ ವಿವಿಧ ಕಂಪನಿಗಳ ಮುಖ್ಯಸ್ಥರು ಉದ್ಯೋಗ ನೇಮಕಾತಿ ಆದೇಶ ಪತ್ರ ನೀಡಿದರು.

ಉದ್ಯೋಗ ಮೇಳ ಉದ್ಘಾಟಿಸಿದ ಲಯಮ್ ಸಂಸ್ಥೆ ಮುಖ್ಯಸ್ಥೆ ಶಾಲಿನಿ ಮಾತನಾಡಿ, ಬೆಂಗಳೂರು ಸೇರಿ ದೇಶ ಮತ್ತು ರಾಜ್ಯದ ಬೇರೆ, ಬೇರೆ ನಗರಗಳಲ್ಲಿನ ಪ್ರತಿಷ್ಠಿತ ಕಂಪನಿಗಳನ್ನು ಕರೆತಂದು ಹಾನಗಲ್ಲ ತಾಲೂಕಿನ ಉದ್ಯೋಗಾಕಾಂಕ್ಷಿ ಯುವ ಸಮುದಾಯಕ್ಕೆ ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ಉದ್ಯೋಗ ಸಮೃದ್ಧಿ ಕೇಂದ್ರ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.

ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಮಾರುತಿ ಶಿಡ್ಲಾಪೂರ ಮಾತನಾಡಿದರು. ಲಯಮ್ ಸಂಸ್ಥೆಯ ಅಧಿಕಾರಿಗಳಾದ ಪವನ, ವಿಕ್ರಂ, ಎಲ್​ಐಸಿ ಅಭಿವೃದ್ಧಿ ಅಧಿಕಾರಿ ಪ್ರಹ್ಲಾದ ಸಾಂಬ್ರಾಣಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net