

ಕುಣಿಗಲ್:ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಜ್ಞಾನನಭಾರತಿ ಪದವಿ ಪೂರ್ವ ಕಾಲೇಜು ಜಿಲ್ಲಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ತುಮಕೂರು ನಗರದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜಿಲ್ಲೆಯ 10 ತಾಲೂಕುಗಳಿಂದ ಸುಮಾರು 1000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಜ್ಞಾನಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸತತ 10 ಬಾರಿ ಚಾಂಪಿಯನ್ ಶಿಪ್ ಪಡೆಯುವುದರ ತೆಗೆ ಈ ಬಾರಿ ಜಿಲ್ಲಾ ಮಟ್ಟದಲ್ಲೂ ಚಾಂಪಿಯನ್ ಆಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಬಾಲಕರ ವಿಭಾಗ-ಶ್ರೀಶೈಲ ಜಂಬಗಿ 100 ಮೀ. ಓಟ ಮತ್ತು 200 ಮೀಟರ್ ಓಟ, ಶಿವಣ್ಣಗೌಡ 5,000 ಮೀಟರ್ ನಡಿಗೆ, ಹಿತೇಶ್ ಗೌಡ ತ್ರಿಬಲ್ ಜಂಪ್ ಹಾಗೂ ಎತ್ತರ ಜಿಗಿತ, ತರುಣ್ ಕರಾಟೆ, ಪುನೀತ್ ಗೌಡ, ತರುಣ್ ಗೌಡ, ಭರತರಾಜ್ ಇವರು 4*400 ರಿಲೆ ಹಾಗೂ ಶಿವಶಂಕರ ಖೋಖೋ, ಹೇಮಾದ್ರಿ ಷಟಲ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗ-ಕಾವ್ಯ 1,500 ಮೀಟರ್ ಓಟ ಹಾಗೂ 3000 ಮೀಟರ್ ಓಟ, ದುರ್ಗಾಂಬಿಕಾ, ಸ್ನೇಹಾ ಗುಡ್ಡಗಾಡು ಓಟ, ಶಾಲಿನಿ, ದುರ್ಗಾಂಬಿಕಾ, ಮಾನಸಾ 4*400 ರಿಲೇ, ದೀಕ್ಷಿತಾ, ಡಯಾನಾ, ಸುಂದರಮ್ಮ ಬಾಲ್ ಬ್ಯಾಡ್ಮಿಂಟನ್, ಭಾವನಾ, ಶಾಲಿನಿ, ಸಿಂಧುಶ್ರೀ, ಕಾವ್ಯಾ, ದುರ್ಗಾಂಬಿಕಾ, ಮಾನಸಾ, ಸಿಂಚನಾ, ಸ್ನೇಹಾ ಖೋಖೋ, ದೀಪ್ತಿ, ಹರ್ಷಿತಾ, ಪ್ರೀತಿ, ಮಾನ್ಯಾ, ಚರಿತಾ ಇವರು ವಾಲಿಬಾಲ್, ರಜನಿಶ್ರೀ, ಸಿಂಚನಾ ಕಬಡ್ಡಿ, ರೂಪಾ, ವರಲಕ್ಷ್ಮೀ ಇವರುಗಳು ಥ್ರೋ ಬಾಲ್ನಲ್ಲಿ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳನ್ನು ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಸಂಘದ ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಎಚ್.ಜಿ.ಚನ್ನಪ್ಪ, ಖಜಾಂಚಿ ಶಿವಣ್ಣಗೌಡ, ನಿರ್ದೇಶಕ ಬೆಟ್ಟಸ್ವಾಮಿ ಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಪನಿಪಾಳ್ಯ ರಮೇಶ, ಪ್ರಾಂಶುಪಾಲ ಗೋವಿಂದೇಗೌಡ, ಉಪನ್ಯಾಸಕ ಸದಾಶಿವ, ತರಬೇತುದಾರ ಅಜೀಜ್ ಉಲ್ಲಾಖಾನ್ ಅವರು ಅಭಿನಂದಿಸಿದ್ದಾರೆ.