ಜ್ಞಾನ ಯಜ್ಞ ಅರಿವು ಕಾರ್ಯಕ್ರಮ

arivu
Published on

ಶಿರಸಿ: ತಾಲೂಕಿನ ಯಡಳ್ಳಿಯ ಸುಕರ್ಮ ಜ್ಯೋತಿಷ್ಯ ಹಾಗೂ ಯಾಗ ಶಾಲೆಯಲ್ಲಿ ಪ್ರತಿ ತಿಂಗಳು ಜ್ಞಾನ ಯಜ್ಞ ನಡೆಸುವ ಉದ್ದೇಶದಿಂದ ಅರಿವು ಎಂಬ ಹೆಸರಿನ ಪ್ರಥಮ ಕಾರ್ಯಕ್ರಮ ಗುರುವಾರ ಜರುಗಿತು.

ವೈದ್ಯ ಡಾ. ವಿನಾಯಕ ಹೆಬ್ಬಾರ್ ಅವರು, ಮಳೆಗಾಲದಲ್ಲಿ ನಮ್ಮ ಆರೋಗ್ಯ, ಪ್ರಕೃತಿ ದತ್ತವಾಗಿ ಸಿಗುವ ಆಹಾರದಿಂದ ಆಗುವ ಪ್ರಯೋಜನ, ಯಾವ ಆಹಾರ ನಿಷಿದ್ಧ ಹಾಗೂ ಯಾವ ಆಹಾರದ ಸೇವನೆಯಿಂದ ರೋಗ ಮುಕ್ತರಾಗಬಹುದು ಎಂಬ ಮಾಹಿತಿ ನೀಡಿದರು.

ಸ್ಥಳೀಯ ಕೃಷಿಕ ಅನಂತ ಹೆಗಡೆ ಬಳಗಂಡಿ ಅಧ್ಯಕ್ಷತೆ ವಹಿಸಿದ್ದರು. ವಿ.ಡಿ. ಭಟ್ಟ ಕರಸುಳ್ಳಿ ಸ್ವಾಗತಿಸಿದರು. ಜನಾರ್ಧನಾಚಾರ್ಯ ಯಡಳ್ಳಿ ನಿರ್ವಹಿಸಿದರು. ಆದಿತ್ಯ ಹೆಗಡೆ ಯಡಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net