ಜ್ಞಾನದ ಜ್ಯೋತಿ ಶ್ರೀ ಮಾಧವಾನಂದ ಪ್ರಭುಜಿ

02 GKK-21-Web
ಸಚಿವ ರಮೇಶ ಜಾರಕಿಹೊಳಿ ಅವರು ಶ್ರೀ ಮಾಧವಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
Published on

ಗೋಕಾಕ: ಜನರಲ್ಲಿ ಧಾರ್ಮಿಕತೆಯ ಅರಿವು ಮೂಡಿಸಲು ಸದ್ಗುರು ಮಾಧವನಂದ ಪ್ರಭುಜಿ ಅವಿರತವಾಗಿ ಶ್ರಮಿಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಸೋಮವಾರ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಧವನಂದರು ಸಾಮೂಹಿಕ ಬೇಸಾಯ ಪದ್ಧತಿ, ಸ್ವತಂತ್ರ ಹೋರಾಟ, ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಸ್ಮರಿಸಿದರು.

ಜಿಪಂ ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಪ್ರಭುದೇವ ಹಡಪದ, ಕೃಷ್ಣಕುಮಾರ ಎಸ್.ಕೆ., ನಗರಸಭೆ ಸದಸ್ಯ ಕೆ. ಎಂ.ಗೋಕಾಕ, ಸಾಹಿತಿ ಮಹಾಲಿಂಗ ಮಂಗಿ, ಕೆಂಚಪ್ಪ ಭಜಂತ್ರಿ, ಮಾರುತಿ ತರಕಾರ, ಮಲ್ಲಪ್ಪ ಬಂಡ್ರೋಳಿ, ಅಶೋಕ ಪೋತದಾರ, ಮಲ್ಲಪ್ಪ ಚಿಂಚಲಿ, ಗುರುನಾಥ ಗುಡೇಣ್ಣವರ, ಭೀಮಶಿ ರೊಡ್ಡನವರ, ಗುರುಲಿಂಗ ನಂದಗಾವ, ಎಂ.ಬಿ.ಸುಲ್ತಾನಪುರ, ಶಿವಾನಂದ ಕಬ್ಬೂರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net