ಜ್ಞಾನ ದೀಪೋತ್ಸವ ಪ್ರವಚನ ಸಪ್ತಾಹ ಸಂಪನ್ನ

Pravachana
Published on

ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಕಾರ್ತಿಕ ಮಾಸದ ನಿಮಿತ್ತ ಆಯೋಜಿಸಿದ್ದ ಜ್ಞಾನ ದೀಪೋತ್ಸವ ಪ್ರವಚನ ಸಪ್ತಾಹ ಸಂಪನ್ನಗೊಂಡಿತು.

ಏಳು ದಿನಗಳ ಕಾಲ ರಾಮಾಯಣದ ಸುಂದರ ಕಾಂಡ ವಿಷಯದ ಬಗ್ಗೆ ಪ್ರವಚನ ನೀಡಿದ ವಿದ್ವಾನ್​ ಹರಿಪ್ರಸಾದ್​ ಭಟ್​ ಹೆರ್ಗ ಅವರನ್ನು ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಷಣ್ಮುಖ ಹೆಬ್ಬಾರ್​ ಮಾತನಾಡಿ, ಕಾರ್ತಿಕ ಮಾಸ ಹಾಗೂ ಜ್ಞಾನ ದೀಪೋತ್ಸವದ ಮಹತ್ವ ತಿಳಿಸಿದರು.

ದೇವಸ್ಥಾನ ಆಡಳಿತ ಮಂಡಳಿಯ ರಮೇಶ್​ ಬಾರಿತ್ತಾಯ, ಅರ್ಚಕ ದಿವಾಕರ ಐತಾಳ, ನಿವೃತ್ತ ಪ್ರಾಂಶುಪಾಲ ಸದಾಶಿವ ರಾವ್​, ಸಮಿತಿಯ ಪದಾಧಿಕಾರಿಗಳಾದ ರಂಗನಾಥ ಸಾಮಗ, ಅಜಿತ್​ ಬಿಜಾಪುರ, ಲಕ್ಷ್ಮೀನಾರಾಯಣ ಆಚಾರ್​ ಉಪಸ್ಥಿತರಿದ್ದರು.

ಶ್ರೀಪತಿ ಭಟ್​, ಪ್ರಕಾಶ್​ ಆಚಾರ್​, ವೇದವ್ಯಾಸ ಆಚಾರ್​, ರಂಗನಾಥ ಸರಳಾಯ, ಚಂದ್ರಕಾಂತ್​, ಶ್ಯಾಮಲಾ ಭಟ್​, ವಸುಧಾ, ರಾಧಿಕಾ, ರೂಪಾ, ಕವಿತಾ ಇನ್ನಿತರರು ಸಹಕರಿಸಿದರು.

ಸಮಿತಿಯ ಅಧ್ಯಕ್ಷ ಕೀಳಂಜೆ ಕೃಷರಾಜ ಭಟ್​ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ಭಟ್​ ವಂದಿಸಿದರು. ಮಾಜಿ ಅಧ್ಯಕ್ಷ ಶ್ರೀನಿವಾಸ ಬಲ್ಲಾಳ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net