ಅಧ್ಯಕ್ಷರಾಗಿ ಜೆ.ಎಲ್.ಜನಾರ್ಧನ್ ಆಯ್ಕೆ

janardhan ayke
Published on

ಮಡಿಕೇರಿ: ಮಹಾಮೈತ್ರಿ ಬುದ್ಧ ವಿಹಾರ ನಿರ್ಮಾಣ ಸಂಬಂಧ ಕೊಡಗು ಜಿಲ್ಲಾ ಮಹಾಮೈತ್ರಿ ಬುದ್ಧ ವಿಹಾರ ಟ್ರಸ್ಟ್ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷ ಜೆ.ಎಲ್.ಜನಾರ್ಧನ್ ಆಯ್ಕೆಯಾಗಿದ್ದಾರೆ.


ಶನಿವಾರಸಂತೆಯ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಸಭೆ ನಡೆಸಿದ ಪ್ರಮುಖರು ಅಧ್ಯಕ್ಷರಾದಿಯಾಗಿ ಇತರ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಗೌರವಾಧ್ಯಕ್ಷರಾಗಿ ಜೆ.ಆರ್.ಪಾಲಾಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್.ವೀರೇಂದ್ರ, ಖಜಾಂಚಿ ಮಂಜು ಪೈಂಟರ್, ಉಪಾಧ್ಯಕ್ಷರಾಗಿ ನಿಂಗರಾಜು ಚೀಕನಹಳ್ಳಿ, ಮಂಜುನಾಥ.ಎಂ.ಕೆ, ಗುರು ಕಾಜೂರು, ಸಹ ಕಾರ್ಯದರ್ಶಿಯಾಗಿ ನವೀನ್ ಕೊಡ್ಲಿಪೇಟೆ, ಟ್ರಸ್ಟಿಗಳಾಗಿ ಎಂ.ಜೆ.ನಾಗರಾಜ್, ರಾಮನಾಯಕ್, ಮಂಜುನಾಥ ಎಂ.ಎನ್, ಮಹಾದೇವ, ಮೋಹನ್, ಪಾಪು, ವಿಶ್ವ ಮಾದ್ರೆ, ಮಂಜು, ಯೋಗೇಶ್ ಹಾಗೂ ಪುಟ್ಟರಾಜು, ಅವರುಗಳನ್ನು ಆಯ್ಕೆ ಮಾಡಲಾಯಿತು.


ನೂತನ ಅಧ್ಯಕ್ಷ ಜೆ.ಎಲ್.ಜನಾರ್ಧನ್ ಮಾತನಾಡಿ, ಬುದ್ಧ ವಿಹಾರ ಯೋಜನೆಗೆ ಎಲ್ಲರೂ ಕೈಜೋಡಿಸಬೇಕು ಮತ್ತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಯಶಸ್ಸುಗೊಳಿಸಬೇಕು ಎಂದು ಕರೆ ನೀಡಿದರು.


ಗೌರವಾಧ್ಯಕ್ಷ ಜೆ.ಆರ್.ಪಾಲಾಕ್ಷ ಅವರು ಮಾತನಾಡಿ ಮಹಾಮೈತ್ರಿ ಬುದ್ಧ ವಿಹಾರ ನಿರ್ಮಾಣದ ಉದ್ದೇಶ ಹಾಗೂ ಟ್ರಸ್ಟ್ ನೋಂದಾವಣಿ ಬಗ್ಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net