ಜೆಜೆಎಂ ಪೈಪ್‌ಲೈನ್‌ನಿಂದ ನೀರು ಪೂರೈಸಿ

Kampli Ceo
ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ಕಚೇರಿ ಆವರಣದಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಾಪಂ ಇಒ ಆರ್.ಕೆ.ಶ್ರೀಕುಮಾರ್, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಪಿಡಿಒ ಶಿಲ್ಪಾರಾಣಿ, ಕಾರ್ಯದರ್ಶಿ ವೀರಭದ್ರಗೌಡ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ವಿವಿಧ ಗ್ರಾಮಗಳಿಗೆ ಬಳ್ಳಾರಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಗುರುವಾರ ಭೇಟಿ ನೀಡಿ ನರೇಗಾ, ಜೆಜೆಎಂ ಸೇರಿ ವಿವಿಧ ಕಾಮಗಾರಿ ಪರಿಶೀಲಿಸಿದರು.

ಸುಗ್ಗೇನಹಳ್ಳಿ ಗ್ರಾಮದಲ್ಲಿ ಎನ್‌ಆರ್‌ಎಲ್‌ಎಂ ಶೆಡ್, ಹೊನ್ನಳ್ಳಿಯಲ್ಲಿ ಜೆಜೆಎಂ ಕಾಮಗಾರಿ, ಜವುಕು ಗ್ರಾಮದಲ್ಲಿ ಶಾಲಾ ಆವರಣ ಗೋಡೆ, ಸಿಸಿ ಚರಂಡಿ ನಿರ್ಮಾಣ, ಹಿರೇಜಾಯಿಗನೂರಿನಲ್ಲಿ ಶಾಲಾ ಆವರಣ, ಶೌಚಗೃಹ ಕಾಮಗಾರಿ, ದೇವಸಮುದ್ರ ಗ್ರಾಮದಲ್ಲಿ ನಿರ್ಮಿಸಿದ ಕುರಿ, ದನದ ಶೆಡ್, ಪ್ರಜಾಸೌಧದ ಬಳಿ ನಿರ್ಮಾಣಗೊಳ್ಳುತ್ತಿರುವ ತಾಪಂ ಕಟ್ಟಡ ಕಾಮಗಾರಿ, ದೇವಸಮುದ್ರ ಗ್ರಾಮದಲ್ಲಿ ಜೆಜೆಎಂ ಕೆರೆಯನ್ನು ವೀಕ್ಷಿಸಿದರು.

ನಂತರ ಮಾತನಾಡಿದ ರಾಹುಲ್ ಸಂಕನೂರ, ಗ್ರಾಮಗಳಲ್ಲಿ ಹಳೆಯ ಪೈಪ್‌ಗಳ ಮೂಲಕ ಕುಡಿವ ನೀರು ಪೂರೈಸಬಾರದು. ಜೆಜೆಎಂ ಹೊಸ ಪೈಪ್‌ಲೈನ್‌ಗಳ ಮೂಲಕವೇ ನೀರು ಪೂರೈಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

ಶಾಲಾ ಆವರಣ, ಶೌಚಗೃಹ, ತಾಪಂ ಕಟ್ಟಡ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ನಂ.10 ಮುದ್ದಾಪುರ ಗ್ರಾಪಂ ಕಚೇರಿ ಕಟ್ಟಡವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಪಂ ಇಒ ಆರ್.ಕೆ.ಶ್ರೀಕುಮಾರ್, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಪಿಡಿಒಗಳಾದ ಹನುಮಂತಪ್ಪ, ಬೀರಲಿಂಗ, ಸಾವಿತ್ರಿ ಗೌರೋಜಿ, ಶಿಲ್ಪಾ ರಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net