

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತವೇ ಶ್ರೀಕೃಷ್ಣ ಪಾರಿಜಾತದ ಜೀವಾಳ. ಇದೊಂದು ರಮ್ಯವಾದ ಗೀತರೂಪಕವಾಗಿದ್ದು, ಸ್ಮರಣ ಶಕ್ತಿ ಹಾಗೂ ಮೌಖಿಕ ಪರಂಪರೆಯೇ ಜಾನಪದ ಕಲಾವಿದರ ಆಸ್ತಿ ಎಂದು ಕರ್ನಾಟಕ ವಿದ್ಯಾವರ್ಧಕ ಸಂದ ಉಪಾಧ್ಯೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದ ಕಲಾ ಮಂಟಪವು ಬುಧವಾರ ಆಯೋಜಿಸಿದ್ದ ಶ್ರೀ ಕೃಷ್ಣ ಪಾರಿಜಾತದಲ್ಲಿ ಭಗವದ್ಗೀತೆ ಉಪನ್ಯಾಸ ಹಾಗೂ ಶ್ರೀ ಕೃಷ್ಣ ಪಾರಿಜಾತ ಕೊರವಂಜಿ ಭಾಗ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀಕೃಷ್ಣನು ಪಾರಿಜಾತದ ಪುಷ್ಪವನ್ನು ರುಕ್ಮಿಣಿಗೆ ನೀಡಿದಾಗ ಅದನ್ನು ತಿಳಿದ ಸತ್ಯಭಾಮೆ ಕೋಪಿಸಿಕೊಂಡಾಗ ಶ್ರೀಕೃಷ್ಣನು ಸತ್ಯಭಾಮೆಯನ್ನು ಸಂತೈಸುವ ಪರಿ ಹಾಗೂ ಪಡಬಾರದ ಕಷ್ಟ, ಅವನಾಡಿದ ನಾಟಕ ಪ್ರಸಂಗವನ್ನು ಶ್ರೀಕೃಷ್ಣ ಪಾರಿಜಾತದಲ್ಲಿ ಮನೋವಾಗಿ ಮೂಡಿ ಬಂದಿದೆ. ಇದು ಶ್ರೀಕೃಷ್ಣ ಪರಮಾತ್ಮನ ಲೀಲೆಯನ್ನೊಳಗೊಂಡ ಒಂದು ಬಯಲಾಟವಾಗಿದೆ. ಉತ್ತರ ಕರ್ನಾಟಕದ ಕಲಾವಿದರು ಈ ಜನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಕೀತಿರ್ಗೆ ಭಾಜನರಾಗಿದ್ದಾರೆ. ಣಿಸುತ್ತಿರುವ ರಂಗಕಲೆಯನ್ನು ಇಂದಿನ ಯುವಕರಿಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಉಪನ್ಯಾಸ ನೀಡಿದ ಮಲ್ಲಿಕಾರ್ಜುನ ದಾದನಟ್ಟಿ, ಶ್ರೀಕೃಷ್ಣ ಪಾರಿಜಾತದಲ್ಲಿಯ ಭಗವದ್ಗೀತೆಯ ಆಯ್ದ ಪ್ರಸಂಗಗಳನ್ನು ಮತ್ತು ಸಾರವನ್ನು ವ್ಯಾಖ್ಯಾನಿಸಿದರು. ಮಲ್ಲವ್ವ ಮ್ಯಾಗೇರಿ ಕೊರವಂಜಿಯ ಭಾಗ ಪ್ರದಶಿರ್ಸಿದರು.
ಶಂಕರ ಹಲಗತ್ತಿ, ಡಾ. ಧನವಂತ ಹಾಜವಗೋಳ, ಡಾ. ಲಿಂಗರಾಜ ಅಂಗಡಿ, ವಿಷಯಾ ಜೇವೂರ, ಆಶಾ ಸೈಯ್ಯದ, ಸುನಿತಾ ವಾಸರದ, ಡಾ. ಮಲ್ಲಿಕಾರ್ಜುನ ಹಿರೇಮಠ, ನಿಂಗಣ್ಣ ಕುಂಟಿ, ಎಂ.ಎಸ್. ನರೇಗಲ್, ಸಂಗಮೇಶ ಮೆಣಸಿನಕಾಯಿ, ಯಕ್ಕೇರಪ್ಪ ನಡುವಿನಮನಿ, ಅರ್ಜುನ, ಮಧುಮತಿ ಸಣಕಲ್, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘಾ ಹುಕ್ಕೇರಿ ನಿರೂಪಿಸಿದರು. ಡಾ. ಪ್ರಭಾ ನೀರಲಗಿ ವಂದಿಸಿದರು.