ಅಹಿಂಸಾ ಓಟಕ್ಕೆ ಉತ್ತಮ ಸ್ಪಂದನೆ

ahimsa run
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜೈನ್ ಇಂಟರ್​ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ (ಜಿತೋ) ವತಿಯಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಅಹಿಂಸಾ ಓಟಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. 450ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಕುಸುಗಲ್ ರಸ್ತೆಯ ಸ್ಪೋರ್ಟ್ಸ್ ಪಾರ್ಕ್​ನಿಂದ ಬೆಳಗ್ಗೆ 6 ಗಂಟೆಗೆ ನಿವೃತ್ತ ಪೊಲೀಸ್ ಅಧಿಕಾರಿ ಎ.ಆರ್. ಬಡಿಗೇರ ಚಾಲನೆ ನೀಡಿದರು. 10ಕಿಲೋ ಮೀಟರ್, 5 ಕಿಲೋ ಮೀಟರ್ ಹಾಗೂ 3 ಕಿಲೋ ಮೀಟರ್ ಓಟವನ್ನು ಪ್ರತ್ಯೇಕವಾಗಿ ನಡೆಸಲಾಯಿತು. ಜನರು ಉತ್ಸಾಹದಿಂದ ಭಾಗವಹಿಸಿದ್ದರು.

ಜಿತೋ ಅಧ್ಯಕ್ಷ ಅನಿಲಕುಮಾರ ನಹಟಾ ಮಾತನಾಡಿ, ವಿಶ್ವದಲ್ಲೆಡೆ ಇಂದು ಶಾಂತಿ, ಅಹಿಂಸೆ ನೆಲೆಗೊಳ್ಳಬೇಕಿದೆ. ಅಹಿಂಸೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಓಟವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ನಿವೃತ್ತ ಸಿಪಿಐ ಶ್ಯಾಮರಾವ್ ಸಜ್ಜನ್, ಪ್ರಕಾಶ ಕೊಠಾರಿ, ವೀರೇಂದ್ರ ಛೇಡಾ, ಪುರಾನ್ ನಹಟಾ, ಸುರೇಶ ಜೈನ್, ಭರತ ಪಟವಾರಿ, ಪ್ರವೀಣ ಚೌಧರಿ, ಗೀತಾ ಛೇಡಾ, ಶೀತಲ್ ಶಾಹ, ನವೀನ ಖಿವೇಸ್ರಾ, ಸಂಗೀತಾ ಜೈನ್, ಲಲಿತಾ ಜೈನ್, ರಾಜನ ಜೈನ್, ಆಶಿಶ್ ನಹಟಾ, ಧಮೇಂದ್ರ ಜೈನ್, ಅಕ್ಷಯ ಜೈನ್, ಅಂಕಿತ ಜೈನ್ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net