ಜಿತೋದಿಂದ ಜೆಬಿಎನ್ ಮಿಲಾಪ್

IMG_20240804_183039_249.jpg
Published on

ಹುಬ್ಬಳ್ಳಿ: ಜಿತೋ ಹುಬ್ಬಳ್ಳಿ ಅಧ್ಯಾಯವು ಕೆಕೆಜಿ ವಲಯದ ಆಶ್ರಯದಲ್ಲಿ ಜೆಬಿಎನ್ ಮಿಲಾಪ್ ಎಂಬ ಎರಡು ದಿನಗಳ ಆಕರ್ಷಕ ಬೃಹತ್ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಿತ್ತು. 10 ನಗರಗಳಿಂದ ಹಲವರು ಇದರಲ್ಲಿ ಭಾಗವಹಿಸಿದ್ದರು.

ಇದರಲ್ಲಿ ಪಾಲ್ಗೊಂಡವರು ಪ್ರಾದೇಶಿಕ ವೈವಿಧ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಪ್ರದರ್ಶಿಸಿ ಇತರರಿಗೆ ಮಾದರಿಯಾದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಪ್ರತಿಷ್ಠಿತ ಜಿತೋ ಸಂಸ್ಥೆಯು ಸಮಾಜದಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ವ್ಯಾಪಾರಿ ವಲಯಕ್ಕೆ ಬಹಳ ಅನುಕೂಲವಾಗಿದೆ ಎಂದರು.

ಕೆಕೆಜಿ ವಲಯ ತಂಡ, ಅಪೆಕ್ಸ್ ತಂಡ ಮತ್ತು 200ಕ್ಕೂ ಹೆಚ್ಚು ವ್ಯಾಪಾರ ಉದ್ಯಮಿಗಳು ಪಾಲ್ಗೊಂಡಿದ್ದ ಸಭೆಯು ಹೆಚ್ಚು ಪ್ರಭಾವಶಾಲಿ ಎನಿಸಿತು. ಅಭಿವೃದ್ಧಿಪರ ಚಿಂತನೆಯ ಮನಸ್ಸುಗಳು ಮತ್ತು ಪ್ರತಿಭೆಗಳ ಸಮ್ಮಿಲನದಿಂದ ಇನ್ನಷ್ಟು ಅಭಿವೃದ್ಧಿಗೆ ಮುನ್ನುಡಿ ಬರೆದಂತಾಯಿತು.

ಸಂಸ್ಥೆಯ ಅಶೋಕ ಸಾಲೇಚಾ, ಅನಿಲಕುಮಾರ ಜೈನ್, ಭವರಲಾಲ್ ಜೈನ್, ತುಷಾರ ಬಫ್ನಾ, ಶರದ್ ಮೊಮಯಾ, ಪ್ರವಿಣ ಚೌಧರಿ, ಭರತ್ ಪಟ್ವಾರಿ, ರಾಜನ್ ಜೈನ್, ಮನೀಶ್ ಜೈನ್, ಕುನಾಲ್ ಜೈನ್ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net