ನೆಮ್ಮದಿ ಜೀವನಕ್ಕೆ ಜಿತೋ ಪ್ರೋತ್ಸಾಹ

h14-sanjay ghodavat
Published on

ಹುಬ್ಬಳ್ಳಿ: ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ (ಜಿತೋ) ಹುಬ್ಬಳ್ಳಿ ಚಾಪ್ಟರ್ ವತಿಯಿಂದ ನಗರದಲ್ಲಿ ಇತ್ತೀಚೆಗೆ ಮೆಗಾ ಫ್ಲ್ಯಾಗ್‌ಶಿಪ್ ‘ಉದ್ಭವ್ 2.0 ಕಾರ್ಯಕ್ರಮವನ್ನು ಎರಡು ದಿನಗಳವರೆಗೆ ಆಯೋಜಿಸಲಾಗಿತ್ತು.

ಜಿತೋ ಮುಖ್ಯ ಕಾರ್ಯದರ್ಶಿ ಪ್ರವಿಣ ಚೌಧರಿ ಮಾತನಾಡಿ, ವ್ಯಾಪಾರದ ಜತೆ ಜತೆಗೆ ನೆಮ್ಮದಿಯ ಜೀವನ ಸಾಗಿಸಲು ವಿವಿಧ ಕಾರ್ಯಕ್ರಮ ಆಯೋಜಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಜಿತೋ ಅತ್ಯುತ್ತಮ ಕಾರ್ಯಕ್ರಮ ಏರ್ಪಡಿಸಿದೆ ಎಂದರು.

ಸಂಜಯ ಘೋಡಾವತ್ ಗ್ರೂಪ್‌ನ ಮುಖ್ಯಸ್ಥ ಸಂಜಯ ಘೋಡಾವತ್, ಐಪಿಒ ತಜ್ಞ ಅಮನ ಸಿಂಗ್ ಭದೋರಿಯಾ, ಸೋಶಿಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಸುಷ್ಮಿತಾ ಸೇಠಿಯಾ, ಎಸ್‌ಪಿ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರೊ. ಸಮೀಶ ದಲಾಲ್, ಹಾನೆಸ್ಟಿ ಯುನಿಫಾರ್ಮ್‌ ಪ್ರೈ.ಲಿ.ನ ವಿಧಾಯಕ ಅರವಿಂದ ಬೆಳ್ಳಾಡ ಮತ್ತು ಮಹಾವೀರ ಗುಗಲಿಯಾ ಆಗಮಿಸಿದ್ದರು.

ಅನಿಲಕುಮಾರ ಜೈನ್ (ಅಧ್ಯಕ್ಷ), ಭವರಲಾಲ್ ಸಿ. ಜೈನ್(ಹಿಂದಿನ ಅಧ್ಯಕ್ಷ), ಗೌತಮ್ ಒಸ್ವಾಲ್, ಭರತ ಪಟವಾರಿ (ಕನ್ವಿನರ್), ರಾಜನ್‌ಜೈನ್, ಧರ್ಮೇಂದ್ರ ಟೇಟೆಡ್, ನವೀನ ಖೀವೇಸ್ರಾ, ಗೀತಾ ಛೇಡಾ, ಕವಿತಾ ಬಾಫಣಾ, ಸಂಗೀತಾ ಸಾಂಘವಿ, ವಣಿತಾ ಸುರಾಣಾ, ರಕ್ಷಿತಾ ತಲೇಡಾ, ಆಕಾಶ ಬಾಗ್ರೇಚಾ, ನೀರವ್ ಮೋಮಯಾ, ಭರತ ಗುಲೇಚಾ ಮತ್ತು ರೋಷನ್ ಟೇಟೆಡ್ ಇತರರು ಇದ್ದರು. ಸಂಜೆ ವೇಳೆ ಡಿವಿಪಿ ಬೆಂಗಳೂರು ತಂಡವು ಭಕ್ತಿ ಹಾಗೂ ಇತರ ಗೀತೆಗಳನ್ನು ಹಾರಿ ರಂಜಿಸಿತು.

ವಿಮಾನ ಆರಂಭಿಸುವ ಭರವಸೆ: ಜಿತೋ ಹುಬ್ಬಳ್ಳಿ ಚಾಪ್ಟರ್ ಸದಸ್ಯರು ಸ್ಟಾರ್ ಏರ್‌ಲೈನ್ಸ್ ಮಾಲೀಕ ಸಂಜಯ ಘೋಡಾವತ್ ಅವರಿಗೆ ಹುಬ್ಬಳ್ಳಿ-ಹಮದಾಬಾದ್ ಮತ್ತು ಹುಬ್ಬಳ್ಳಿ-ಜೋಧಪುರ ವಿಮಾನ ಸೇವೆ ಪ್ರಾರಂಭಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಂಜಯ, ಶೀಘ್ರದಲ್ಲೇ ಈ ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net