

ಹುಬ್ಬಳ್ಳಿ: ಇಲ್ಲಿಯ ಜಿತೋ ಹುಬ್ಬಳ್ಳಿ ಚಾಪ್ಟರ್ ವತಿಯಿಂದ ಇದೇ ಮೊದಲ ಬಾರಿ ಬಾಕ್ಸ್ ಕ್ರಿಕೆಟ್ ಲೀಗ್ ಸಲುವಾಗಿ ಕ್ರೀಡಾಪಟುಗಳ ಆಕ್ಶನ್ (ಹರಾಜು) ಕಾರ್ಯಕ್ರಮ ನಗರದಲ್ಲಿ ಸೋಮವಾರ ನಡೆಯಿತು.
ಮಹಿಳೆಯರು ಹಾಗೂ ಪುರುಷ ಪಟುಗಳ ಆಕ್ಶನ್ ನಡೆಯಿತು. ಟೈಟಲ್ ಪ್ರಾಯೋಜಕರಾದ ವಿಭವ ಇಂಡಸ್ಟ್ರೀಸನ ಭಾರತಿ ನಂದಕುಮಾರ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಿಳೆಯರ ಆರು ತಂಡಗಳನ್ನು ಹಾಗೂ ಪುರುಷರ 12 ತಂಡಗಳನ್ನು ರಚನೆ ಮಾಡಲಾಯಿತು. ಜನೆವರಿ 25 ಹಾಗೂ 26ರಂದು ಕ್ರಿಕೆಟ್ ಲೀಗ್ ಪಂದ್ಯಗಳು ನಡೆಯಲಿವೆ.
ಜಿತೋ ಸಂಘಟನೆಯ ಅನಿಲಕುಮಾರ ಜೈನ್, ಪ್ರವಿಣ ಚೌಧರಿ, ಭರತ ಪಟವಾರಿ, ಗೀತಾ ಛೇಡಾ, ಅಕ್ಷಯ ಬಾಗ್ರೇಚಾ, ನೀರವ ಮೊಮಯಾ, ಯೋಗೇಶ ಜೈನ್, ಸಪ್ನಾ ಜೈನ್, ಇತರರು ಇದ್ದರು.