ಜಿಂದಾಲ್ ಬಂದೋಬಸ್ತ್ ಕರ್ತವ್ಯಕ್ಕೆ ಹೋಗಿ ಬಂದ ಪೇದೆಗೆ ಸೋಂಕು; ಇಟ್ಟಿಗಿ ಠಾಣೆಗೆ ಸ್ಯಾನಿಟೈಸೇಷನ್

100720 Ittigi Police Station Sanitization
ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಪೊಲೀಸ್ ಠಾಣೆಗೆ ಗ್ರಾಪಂ ಸಿಬ್ಬಂದಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿರುವುದು.
Published on

ಹೂವಿನಹಡಗಲಿ: ಜಿಂದಾಲ್ ಬಂದೋಬಸ್ತ್ ಕರ್ತವ್ಯ ಮುಗಿಸಿ ಬಂದಿದ್ದ ತಾಲೂಕಿನ ಇಟ್ಟಿಗಿ ಠಾಣೆ ಪೇದೆಗೆ ಕರೊನಾ ದೃಢಪಟ್ಟಿದ್ದು, ಮಾಚಿಹಳ್ಳಿಯ ಕೋವಿಡ್ ಕೇರ್ ಸೆಂಟರ್‌ಗೆ ಕಳಿಸಲಾಗಿದೆ. ಸೋಂಕಿತ ವಾಸವಿದ್ದ ಮನೆ ಸುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಗ್ರಾಪಂ ಸಿಬ್ಬಂದಿ ಠಾಣೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು.

ಪೊಲೀಸರಿಗೆ ಭೀತಿ: ಜಿಂದಾಲ್ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದ ತಾಲೂಕಿನ ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಈ ಪೈಕಿ ಕೆಲವರು ಕೋವಿಡ್ ತಪಾಸಣೆಗೆ ಒಳಗಾಗಿದ್ದು, ಸೋಂಕು ಪತ್ತೆಯಾಗಿಲ್ಲ. ಇನ್ನು ಕೆಲವರು ತಪಾಸಣೆಗೆ ಒಳಗಾಗದೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಸಿಬ್ಬಂದಿ, ಜನರಲ್ಲಿ ಭಯ ಆವರಿಸಿದೆ. ಜಿಂದಾಲ್ ಕರ್ತವ್ಯಕ್ಕೆ ತೆರಳಿದ್ದ ಸಿಬ್ಬಂದಿಯನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net