ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಸಲಹೆ ಅಗತ್ಯ

Untitled design (9)
ಸಂಡೂರು ತಾಲೂಕು ತೋರಣಗಲ್‌ನ ಆದರ್ಶ ಜಿಂದಾಲ್ ವಿದ್ಯಾಲಯದ ಹದಿಹರಿಯದ ಆರೋಗ್ಯ ಮತ್ತು ಶುಚಿತ್ವ ಕುರಿತು ಅರಿವಿನ ಕಾರ್ಯಕ್ರಮದಲ್ಲಿ ಡಾ.ಸಾಧಿಯಾ, ಬಿಎಚ್‌ಇಒ ಶಿವಪ್ಪ, ನಿರೀಕ್ಷಕ ಶಕೀಲ್‌ರನ್ನು ಮುಖ್ಯ ಶಿಕ್ಷಕಿ ಭಾಗ್ಯವತಿ ಇನ್ನಿತರರಿದ್ದರು.
Published on

ಸಂಡೂರು: ವಿವೇಕಾನಂದ, ಎಪಿಜಿ ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ ಮಹನೀಯರ ಅದರ್ಶಗಳನ್ನು ಪಾಲಿಸಿ ಹೊಸ ಅವಿಷ್ಕಾರಗಳಿಗೆ ವಿದ್ಯಾರ್ಥಿಗಳು ಮುಂದಾಗಲಿ ಎಂದು ವಿದ್ಯಾಲಯದ ಮುಖ್ಯ ಶಿಕ್ಷಕಿ ಭಾಗ್ಯವತಿ ಹೇಳಿದರು.

ಹದಿಹರೆಯದ ವಯಸ್ಸಿನಲ್ಲಿ ಬದಲಾವಣೆಗಳಿಗೆ ಒಗ್ಗಿಕೊಳ್ಳಿ

ತಾಲೂಕಿನ ಜಿಂದಾಲ್ ಆದರ್ಶ ವಿದ್ಯಾಲಯದಲ್ಲಿ ಹದಿಹರೆಯದ ಆರೋಗ್ಯ ಮತ್ತು ಶುಚಿತ್ವ ಕುರಿತು ಅರಿವಿನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಹದಿಹರೆಯದ ವಯಸ್ಸಿನಲ್ಲಿ ಬದಲಾವಣೆಗಳಿಗೆ ಒಗ್ಗಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಸಲಹೆಗಳು ಉಪಯುಕ್ತವಾಗಿವೆ ಎಂದು ತಿಳಿಸಿದರು.

ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಾದಿಯ ಮಾತನಾಡಿ, ಉತ್ತಮ ಆರೋಗ್ಯದಿಂದ ಒಳ್ಳೆಯ ಆಲೋಚನೆಗಳು ಮೂಡಲು ಸಾಧ್ಯ. ವಿಶಾಲ ಮನೋಭಾವನೆಯೊಂದಿಗೆ ಹೊಸ ಅವಿಷ್ಕಾರಗಳು ಉದಯಿಸುತ್ತವೆ. ಮಾದಕ ವಸ್ತುಗಳ ಸೇವೆನೆಯಿಂದ ದೂರವಿರಬೇಕು. ವೈಯಕ್ತಿಕ ಶುಚಿತ್ವದ ಜತೆಗೆ ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಆರೋಗ್ಯ ಜಾಗೃತಿ ಮೂಡಿಸುವ ವಿಡಿಯೋಗಳ ಪ್ರದರ್ಶನ ಮಾಡಲಾಯಿತು. ವಿದ್ಯಾಲಯದ ಸಹ ಶಿಕ್ಷಕರಾದ ಎಂ.ರವಿ, ಜಗದೀಶ್, ಶ್ವೇತಾ, ತೆಜೇಶ್ವರಿ, ಜೋನಾ, ಸಂಗೀತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಅರೋಗ್ಯ ನಿರೀಕ್ಷಕ ಶಕೀಲ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net