

ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್, ಬೆಳ್ತಂಗಡಿ ಶಾಖಾ ವತಿಯಿಂದ, ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಯು ಬೆಳ್ತಂಗಡಿಯ ಮಂಜುನಾಥ ಸ್ವಾಮಿ ಕಲಾ ಮಂಟಪದಲ್ಲಿ ನ.24ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ.ವಿಭಾಗದ ಉಪಾಧ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ವಲಯ ನಿರ್ದೇಶಕ ಬಿ.ಸೋಮ ಶೇಖರ ಶೆಟ್ಟಿ, ಬಿ.ಪ್ರಮೋದ್ ಕುಮಾರ್, ವಿಭಾಗದ ಜತೆ ಕಾರ್ಯದಶಿಗಳಾದ ಶ್ವೇತಾ ಮೂಡುಬಿದಿರೆ, ಶಶಿಕಲಾ ಕಾರ್ಕಳ, ಮಿಲನ್ ಅಧ್ಯಕ್ಷ ನವೀನ್ ಕುಮಾರ್ ಜೈನ್, ಕಾರ್ಯದರ್ಶಿ ಸಂಪತ್ ಕುಮಾರ್ ಜೈನ್, ಖಜಾಂಚಿ ನಿಖಿತ್ ಕುಮಾರ್ ಜೈನ್, ಭುಜಬಲಿ, ಜೀವಂಧರ್, ಪ್ರಶಾಂತ್ ಕುಮಾರ್, ಧರ್ಮರಾಜ, ರತ್ನವರ್ಮ ಜೈನ್, ಪಾರ್ಶ್ವನಾಥ ಜೈನ್, ದೀಪಕ್ ಕುಮಾರ್ ರಜತ, ಶಶಿಪ್ರಭ, ಕರ್ತವ್ಯ ಜೈನ್, ವೀರ್ ದೀಕ್ಷಿತ್ ಜೈನ್ ಉಪಸ್ಥಿತರಿದ್ದರು.
ಜೈನ್ ಮಿಲನ್ ಮಾರ್ಗದರ್ಶಕಿ ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾ ಯಶೋವರ್ಮ, ಡಿ.ನಿಶ್ಚಲ್ ಕುಮಾರ್ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಮಂತ್ರಿಸಲಾಯಿತು.