ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ವಿವಿಧ ಜಿಲ್ಲೆಗಳ ಗ್ರಾಮ ವಾಸ್ತವ್ಯದ ನೋಟ

r ashok
r ashok
Published on

ಬೆಂಗಳೂರು: ಕಂದಾಯ ಇಲಾಖೆ ವತಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದಿನಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆರಂಭವಾಗಿದೆ. ಕೆಲ ಕಡೆ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿದ್ದರೆ, ಇನ್ನೂ ಕೆಲ ಕಡೆ ಕಾಟಾಚಾರಕ್ಕೆಂಬಂತೆ ನಡೆದಿವೆ. ರಾಜ್ಯಾದ್ಯಂತ ಇಂದು ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಗಳ ಝಲಕ್ ಇಲ್ಲಿದೆ...

ಬೆಂಗಳೂರು ಗ್ರಾಮಾಂತರ: ಕಂದಾಯ ಇಲಾಖೆಯ ನೂತನ ಕಾರ್ಯಕ್ರಮ "ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ" ರಾಜ್ಯಮಟ್ಟದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ದೊಡ್ಡ ಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿದರು.

ಬಳ್ಳಾರಿ: ಡಿಸಿ ಪವನ್ ಕುಮಾರ್ ಮಾಲಪಾಟಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ತಿಮ್ಮಲಾಪುರ ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಜನರ ಬಳಿ ಅಹವಾಲು ಸ್ವೀಕಾರ ಮಾಡಲಾಗುತ್ತದೆ. ಪ್ರಮುಖವಾಗಿ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸೋ ಪ್ರಯತ್ನ ಮಾಡಲಾಗುತ್ತದೆ. ಪ್ರಮುಖವಾಗಿ ಕಂದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಒತ್ತು ನೀಡಲಾಗಿದೆ. ಈಗಾಗಲೇ ಜನರ ಸಮಸ್ಯೆಗಳ ಪಟ್ಟಿ ನಮ್ಮ ಕೈಯಲ್ಲಿದೆ. ಮನೆ, ನಿವೇಶನ ಸೇರಿದಂತೆ ಹಲವಾರು ಸಮಸ್ಯೆಳ ಕುರಿತು ಅರ್ಜಿಗಳನ್ನು ಪಡೆಯಲಾಗಿದೆ. ಸಾಧ್ಯವಾದಷ್ಟು ಸ್ಥಳದಲ್ಲೇ ಸಮಸ್ಯೆ ಪರಿಹಾರ ಮಾಡಲು ಮುಂದಾಗುತ್ತೇವೆ ಎಂದು ಡಿಸಿ ಹೇಳಿದ್ದಾರೆ.

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕು ಹೊಸಮಾಲಂಗಿಯಲ್ಲಿ ಕಾರ್ಯಕ್ರಮ. ಹೊಸಮಾಲಂಗಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ. ಗ್ರಾಮದ ಶಾಲಾವರಣದಲ್ಲಿ ಗಿಡನೆಟ್ಟು ಕಾರ್ಯಕ್ರಮಕ್ಕೆ ಚಾಲನೆ. ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ ಜೊತೆಗೆ ಆರೋಗ್ಯ ಶಿಬಿರ, ಆಧಾರ್ ತಿದ್ದುಪಡಿ, ಸರ್ಕಾರಿ ಯೋಜನೆಗಳಬಗ್ಗೆ ಜಾಗೃತಿ ಮೂಡಿಸುವ ವಸ್ತು ಪ್ರದರ್ಶನದಲ್ಲಿ. ಇದೊಂದು ವಿನೂತನ ಹಾಗು ವಿಶಿಷ್ಟ ಕಾರ್ಯಕ್ರಮ ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿಕೆ.

ಯಾದಗಿರಿ: ಕಾಟಾಚಾರದ ಯಾದಗಿರಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ. 10:30 ಕ್ಕೆ ಆರಂಭವಾಗಬೇಕಿದ್ದ ಸಭೆ 12 ಗಂಟೆಯಾದ್ರು ಆರಂಭಗೊಂಡಿಲ್ಲ. ಬರೀ ಪೋಟೋಗೆ ಪೋಸು ಕೊಡಲು ಮುಂದಾದ ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ. ಜನರ ಸಮಸ್ಯೆ ಕೇಳುವ ಬದಲಿಗೆ ಬರೀ ಮಳಿಗೆಗಳ ಉದ್ಘಾಟನೆ ಸೀಮಿತವಾದ ಕಾರ್ಯಕ್ರಮ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿ.ಪಂ ಸಿಇಓ ಶಿಲ್ವಾ ಶರ್ಮಾ ಗೈರು.

ರಾಯಚೂರು: ಮೊದಲ ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾಧಿಕಾರಿ ಗೈರು ಇಂದು ನಡೆದ ಜಿಲ್ಲಾಧಿಕಾರಿಗಳ ನಡೆ - ಹಳ್ಳಿಯ ಕಡೆ ಕಾರ್ಯಕ್ರಮ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಕಳ್ಳಿ ಲಿಂಗಸೂಗೂರು ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ. ಕಳೆದ ಐದು ದಿನಗಳಿಂದ ಕಚೇರಿಗೆ ಬಾರದ ರಾಯಚೂರು ಡಿಸಿ. ಆರ್. ವೆಂಕಟೇಶ್ ಕುಮಾರ್ ರಾಯಚೂರು ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ಆಗಿದ್ರೂ ರಿಲೀವ್ ಆಗದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ . ರಾಯಚೂರು ಹೊಸ ಡಿಸಿ ವೆಂಕಟರಾಜು ಅಧಿಕಾರ ಸ್ವೀಕರಿಸಲು ವಿಳಂಬ ಜಿಲ್ಲಾಧಿಕಾರಿ ಇಲ್ಲದೆ ಎಡಿಸಿ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ.

ದಾವಣಗೆರೆ; ಬಸವನಕೋಟೆ ಗ್ರಾಮದ ಪರಿಶಿಷ್ಠರ ಕಾಲೊನಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ಸದ ತಂಡ ಭೇಟಿ. ಬಸವನಕೋಟೆಯಲ್ಲಿ ನಮ್ಮ ನಡೆ ಗ್ರಾಮದ ಕಡೆ ಕಾರ್ಯಕ್ರಮ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮ ಪರಿಶಿಷ್ಠ ಕಾಲೊನಿಯಲ್ಲಿ ಪಾದಯಾತ್ರೆ ನಡೆಸಿದ ಡಿಸಿ ಹಾಗೂ ಅಧಿಕಾರಿಗಳ ತಂಡ. ಸಾರ್ವಜನಿಕರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

ಕುಂದುಕೊರತೆ, ಅಹವಾಲು ಸ್ವೀಕರಿಸಿದ ಅಧಿಕಾರಿಗಳು. ಪರಿಶಿಷ್ಟರ ಕಾಲೊನಿಯಲ್ಲೆ ಕುಂದು-ಕೊರತೆ ಸಭೆ ನಡೆಸಿದ ಡಿಸಿ.

ಬಾಗಲಕೋಟೆ: ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಹಮ್ಮಿಕೊಂಡ ವಾಸ್ತವ್ಯ ಕಾರ್ಯಕ್ರಮ. ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರಿಗೆ ಗ್ರಾಮದ ಜನರಿಂದ ಅದ್ದೂರಿ ಸ್ವಾಗತ. ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿಗಳನ್ನ ವಿವಿಧ ಜಾನಪದ ಕಲಾ ಮೇಳ, ಶಾಲಾ ಮಕ್ಕಳಿಂದ ಸ್ವಾಗತ. ಮೆರವಣಿಗೆ ಮೂಲಕ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ. ಗ್ರಾಮದ‌ ಆಂಜನೇಯ ದರ್ಶನ ಪಡೆದ‌ ಜಿಲ್ಲಾಧಿಕಾರಿ ರಾಜೇಂದ್ರ. ಮ ವಾಸ್ತವ್ಯಕ್ಕೆ ಅದ್ದೂರಿ ಚಾಲನೆ.

ತುಮಕೂರು‌: ಮಕೂರು‌‌ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಗ್ರಾಮ ವಾಸ್ತವ್ಯ. ಗಿರಿ ತಾಲ್ಲೂಕಿನ ಗಡಿಗ್ರಾಮ ಲಕ್ಷ್ಮೀಪುರದಲ್ಲಿ ಗ್ರಾಮವಾಸ್ತವ್ಯ. ರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜನರಿಂದ ಅಹವಾಲು ಸ್ವೀಕಾರ. ರ್ಕಾರಿ ಯೋಜನೆಗಳ ಮಾಹಿತಿ ಸಾರ್ವಜನಿಕರಿಗೆ ತಲುಪಿಸೋ ನಿಟ್ಟಿನಲ್ಲಿ ಸ್ಟಾಲ್ ಗಳ ಆಯೋಜನೆ.. ಸಿ ವೈಎಸ್ ಪಾಟೀಲ್ ಗೆ ಎಸ್ಪಿ ಕೋನವಂಶಿಕೃಷ್ಣ,ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿ.

ಮಂಡ್ಯ: ಮಂಡ್ಯದ ಶೀಳನೆರೆ ಗ್ರಾಮದಲ್ಲಿ ಡಿಸಿ ಗ್ರಾಮ ವಾಸ್ತವ್ಯ ಹಿನ್ನೆಲೆ. ತಿ ಬೆಳಗಿಸಿ ಕಾರ್ಯಾಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿಗಳು. ಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಯಿಂದ ಕಾರ್ಯಕ್ರಮಕ್ಕೆ ಚಾಲನೆ. ಕಳೆದ ರಾತ್ರಿಯೇ ಶೀಳನೆರೆಯ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಡಿಸಿ. ದು ವೇದಿಕೆ ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆ ಆಲಿಸಲು ಮುಂದಾಗಿರುವ ಜಿಲ್ಲಾಡಳಿತ. ರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಭಾಗಿ.

ಹಾಸನ: ಡಿಸಿ ಸಿ ಆರ್ ಗಿರೀಶ್ ಇಂದು ಹೆತ್ತೂರು ಗ್ರಾಮದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಮಾಡಿ ಹಲವಾರು ಗ್ರಾಮಸ್ಥರ ಸಮಸ್ಯೆ ಬಗೆಹರಿಸಲು ನೆರವಾದರು. ಹೆತ್ತೂರು ಗ್ರಾಮದ ಸುತ್ತಮುತ್ತ ನುರಾರು ತಮ್ಮ ಸಮಸ್ಯೆ ಬಗ್ಗೆ ನೇರವಾಗಿ ಡಿಸಿಗೆ ಮನವಿ ಸಲ್ಲಿಸಿ ಕೆಲವರು ಸ್ಥಳದಲ್ಲೇ ಪರಿಹಾರ ಕಂಡುಕೊಂಡು ಸಂತೋಷ ಪಟ್ಟರು. ಇನ್ನು ಈ ಗ್ರಾಮವಾಸ್ತವ್ಯ ನಂತರ 15 ದಿನದಲ್ಲಿ ಪುನಹ ಒಂದು ಸಭೆ ಮಾಡಿ ಇಂದು ಪಡೆದ ಅರ್ಜಿಗಳ ಬಗ್ಗೆ ಕೆಲಸ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಕಾಳಜಿ ವಹಿಸಲಾಗುವುದು ಎಂದು ಹಾಸನ ಡಿಸಿ ಆರ್ ಗಿರೀಶ್ ಬರವಸೆ ನೀಡಿದ್ರು. ವರ್ಷಗಳಿಂದ ಕಚೇರಿಗೆ ಅಲೆದು ಬೇಸತ್ತಿದ್ದ ಮಂದಿಗೆ ಡಿಸಿ ಯೇ ತಮ್ಮೂರಿಗೆ ಆಗಮಿಸಿ ಸಮಸ್ಯೆ ಆಲಿಸಿದ್ದು ನುರಾರು ಗ್ರಾಮಸ್ಥರಿಗೆ ನಿಟ್ಟುಸಿರು ಬಿಡುವಂತಾಯಿತು.‌

ಧಾರವಾಡ: ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸೇವೆ ಹಾಗೂ ಸೌಲಭ್ಯಗಳನ್ನು ಗ್ರಾಮೀಣ ಜನರಿಗೆ ಅವರ ಸ್ಥಳದಲ್ಲಿಯೇ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಲಾಗಿದೆ.ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಳ್ಳಿಗೆ ಆಗಮಿಸುವ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ ಜಿಲ್ಲೆಯ ಜನತೆ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು. ಕೋಗಿಲಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ಗ್ರಾಮವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಅಹವಾಲುಗಳ ಸ್ವೀಕಾರ ಕಾರ್ಯ ಉದ್ಘಾಟಿಸಿ, ಸರ್ವಜ್ಞ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net