ಹಾವೇರಿ: ನೆಹರು ಯುವ ಕೇಂದ್ರದ ವತಿಯಿಂದ ಜಿಲ್ಲಾ ಮಟ್ಟದ ಯುವ ಉತ್ಸವವನ್ನು ಜೂನ್ 5ರಂದು ನಗರದ ಜಿ.ಎಚ್.ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಪೇಂಟಿಂಗ್ ಸ್ಪರ್ಧೆ, ಕವನ ಬರವಣಿಗೆ ಸ್ಪರ್ಧೆ, ಮೊಬೈಲ್ ಫೋಟೋಗ್ರಫಿ ಸ್ಪರ್ಧೆ, ಸಾಂಸ್ಕೃತಿಕ ಜಾನಪದ ಮತ್ತು ಸಾಂಪ್ರದಾಯಿಕ ನೃತ್ಯ ಸ್ಪರ್ಧೆ, ಭಾಷಣ ಸ್ಪರ್ಧೆ ಈ ಎಲ್ಲ ಸ್ಪರ್ಧೆಗಳಲ್ಲಿ ಒಂದರಲ್ಲಿ ಮಾತ್ರ ಆಸಕ್ತರು ಭಾಗವಹಿಸಬಹುದು. ಆಸಕ್ತರು 15ರಿಂದ 29 ವರ್ಷದ ಒಳಗಿನವರಾಗಿರಬೇಕು.
ಪೇಂಟಿಂಗ್ ಸ್ಪರ್ಧೆ ಮತ್ತು ಮೊಬೈಲ್ ಫೋಟೋಗ್ರಫಿ ಸ್ಪರ್ಧೆ ಹಾಗೂ ಕವನಗಳ ಬರವಣಿಗೆ ಈ ಮೂರು ಸ್ಪರ್ಧೆಯಲ್ಲಿ ಪೇಂಟಿಂಗ್‌ನಲ್ಲಿ 3 ಜನ, ಮೊಬೈಲ್ ಫೋಟೋಗ್ರಫಿಯಲ್ಲಿ 3 ಜನ, ಕವನಗಳ ಬರವಣಿಗೆಯಲ್ಲಿ ಮೂವರು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಥಮ ಬಹುಮಾನ 1000 ರೂ., ದ್ವಿತೀಯ ಬಹುಮಾನ 750 ರೂ. ಹಾಗೂ ತೃತೀಯ ಬಹುಮಾನ 500 ರೂ.ನೀಡಲಾಗುವುದು. ಪ್ರಥಮ ಮತ್ತು ದ್ವಿತೀಯ ಬಹುಮಾನ ವಿಜೇತರಾದವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ಸಾಂಸ್ಕೃತಿಕ ಜಾನಪದ ಮತ್ತು ಸಾಂಪ್ರದಾಯಿಕ ಗುಂಪು ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 5,000 ರೂ., ದ್ವಿತೀಯ ಬಹುಮಾನ 2500 ರೂ. ಹಾಗೂ ತೃತೀಯ ಬಹುಮಾನ 1,250 ರೂ. ನೀಡಲಾಗುವುದು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 5,000 ರೂ., ದ್ವಿತೀಯ ಬಹುಮಾನ 2,000 ರೂ. ಹಾಗೂ ತೃತೀಯ ಬಹುಮಾನ 1,000 ರೂ. ನೀಡಲಾಗುವುದು. ಪ್ರಥಮ ಬಹುಮಾನ ವಿಜೇತರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೊಂದಣಿ ಮಾಡಲು ನೆಹರು ಯುವ ಕೇಂದ್ರ ಕಾರ್ಯಾಲಯ, ಎ.ಎಲ್.ಕಾಮತ್ ಬಿಲ್ಡಿಂಗ್, ವಿದ್ಯಾನಗರ 3ನೇ ಕ್ರಾಸ್, ಬಾಟಾ ಶೋರೂಂ ಹತ್ತಿರ, ಪಿ.ಬಿ.ರೋಡ್, ಹಾವೇರಿ ಇಲ್ಲಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.