

ಮೂಡಲಗಿ:ಕಾಶ್ಮೀರದ ಪೆಹಲ್ಗಾಮ್ನಲ್ಲಿ ಹಿಂದುಗಳ ಮೇಲೆ ನಡೆದ ದಾಳಿ ಹಾಗೂ ಜನಿವಾರ ಕತ್ತರಿಸಿದ ಪ್ರಕರಣ ಖಂಡಿಸಿ ಹಿಂದುಪರ ಸಂಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದಲ್ಲಿ ಶಿರಸ್ತೇದಾರ ಪರಶುರಾಮ ನಾಯಕಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದ ಹನುಮಾನ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮೂಲಕ ಸಂಚರಿಸಿ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪ್ರತಿಭಟನಾಕಾರರು ಪಾಕಿಸ್ತಾನ ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದು ಪರಿಷತ್ ಪ್ರಾಂತ ಸಂಯೋಜಕ ಲ$್ಮಣ ಮಿಶಾಳೆ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ನಲ್ಲಿ 28ಕ್ಕೂ ಹೆಚ್ಚು ಪ್ರವಾಸಿಗ ಹಿಂದುಗಳ ಮೇಲೆ ನಡೆದ ಉಗ್ರರ ದಾಳಿ ಖಂಡನೀಯ. ಹಿಂದುಗಳನ್ನು ಹತ್ಯೆಗೈದ ಜಿಹಾದಿ ಉಗ್ರರನ್ನು ಕೂಡಲೇ ಸಂಹಾರ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಲ$್ಮಣ ಯಡ್ರಾವಿ, ಬಾಲದೇವ ಸಣ್ಣಕ್ಕಿ ಮಾತನಾಡಿ, ಹಿಂದುಗಳ ಮೇಲೆ ದಾಳಿ ಮಾಡಿದ ಉಗ್ರರಿಗೆ ತಕ್ಕ ಶಾಸ್ತಿಯಾಗಬೇಕು. ಹೀಗಾಗಿ, ನಾವೆಲ್ಲ ಒಗ್ಗೂಡಿ ಹೋರಾಡೋಣ ಎಂದು ತಿಳಿಸಿದರು.
ಮಾಳಪ್ಪ ಮೆಳವಂಕಿ, ಪುರುಷೋತ್ತಮ ಒಡೆಯರ, ಮಾಂತೇಶ ಹತ್ರಿಕಿ, ಬಸಯ್ಯ ಹಿರೇಮಠ, ಸಂಗಯ್ಯ ವಸ್ತ್ರದ, ದಯಾನಂದ ಸವದಿ, ಮಾಲತಿ, ಸುಜಾತಾ ಹಿರೇಮಠ, ಮಹಾದೇವ ಶೆಕ್ಕಿ, ಮಹಾಂತೇಶ ಕುಡುಚಿ, ಶಿವಭೋದ ಗೋಕಾಕ ಇತರರಿದ್ದರು.