

ಮುಂಡಗೋಡ: ತಾಲೂಕಿನ ಲಕ್ಕೋಳ್ಳಿ ಗ್ರಾಮದ ಜಿಗಳಗಟ್ಟಿ ಕೆರೆಯಲ್ಲಿ ಯಾರೋ ಕಿಡಿಗೇಡಿಗಳು ವಿಷ ಹಾಕಿದ್ದರಿಂದ ಸಾವಿರಾರು ಮೀನುಗಳು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಗ್ರಾಮದ ಫಕೀರೇಶ ಸಂಕನಾಳ ಎಂಬುವವರು ಮೀನು ಸಾಕಾಣಿಕೆ ಮಾಡಲು ಚವಡಳ್ಳಿ ಗ್ರಾಮ ಪಂಚಾಯಿತಿಯಿಂದ ಮೂರು ವರ್ಷಗಳ ಅವಧಿಗೆ ಜಿಗಳಗಟ್ಟಿ ಕೆರೆ ಟೆಂಡರ್ ಪಡೆದು ಜಿಗಳಗಟ್ಟಿ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದರು. ಈ ವರ್ಷ ಕೆರೆಯಲ್ಲಿ ಸಾವಿರಾರು ಮೀನು ಮರಿಗಳನ್ನು ಬಿಟ್ಟಿದ್ದರು.
ಯಾರೋ ದುಷ್ಕರ್ವಿುಗಳು ಕೆರೆಗೆ ವಿಷ ಹಾಕಿದ್ದರಿಂದ ಕ್ವಿಂಟಾಲ್ ನಷ್ಟು ಮೀನುಗಳು ಸಾವನ್ನಪ್ಪಿವೆ. ಇದರಿಂದ ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ಗ್ರಾಪಂ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಫಕ್ಕಿರೇಶ ತಿಳಿಸಿದ್ದಾರೆ.