ಹಾಕಿ ಪ್ರಿಯರ ಮನಗೆದ್ದ ಜಾರ್ಖಂಡ್ ಬಾಲಕಿಯರು

Jharkhand girls are the favorite of hockey lovers
Published on

ಪೊನ್ನಂಪೇಟೆ:

17ರ ವಯೋಮಾನದ ಬಾಲಕಿಯರ ರಾಷ್ಟಿçಯ ಹಾಕಿ ಪಂದ್ಯಾವಳಿ ಅಂತಿಮ ಪಂದ್ಯದಲ್ಲಿ ಸರ ಸರನೇ ಓಟ, ಚುರುಕಿನ ಆಟ, ಕಲಾತ್ಮಕ ನಡೆ, ರಕ್ಷಣಾತ್ಮಕ ತಂತ್ರಗಳಿAದ ಜಾರ್ಖಂಡ್‌ನ ಬಾಲಕಿಯರು ಕೊಡಗಿನ ಪ್ರೇಕ್ಷಕರ ಮನ ಗೆದ್ದರು.

ಪೊನ್ನಂಪೇಟೆ ಆಸ್ಟೊçÃಟರ್ಫ್ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ ನಂತರ ನಡೆದ ಚಂಡೀಗಢ ಮತ್ತು ಜಾರ್ಖಂಡ್ ನಡುವಿನ ಫೈನಲ್ ಪಂದ್ಯಕ್ಕೆ ಗ್ಯಾಲರಿ ಭರ್ತಿ ಆಗಿತ್ತು. ಕ್ರೀಡೆ ಅದರಲ್ಲೂ ಹಾಕಿ ಆಟದ ತಾಂತ್ರಿಕ ಅಂಶಗಳ ಬಗ್ಗೆ ಆಳ ಮಾಹಿತಿ ಪಡೆದಿರುವ ಜಿಲ್ಲೆಯ ಕ್ರೀಡಾ ಶಿಕ್ಷಕರು ಮತ್ತು ಹಿರಿಯ ಆಟಗಾರರೇ ಬಹುತೇಕ ತುಂಬಿದ್ದ ಗ್ಯಾಲರಿಯಲ್ಲಿ ಕುಳಿತಿದ್ದವರು ಜಾರ್ಖಂಡ್ ಆಟಗಾರರ ಆಟಕ್ಕೆ ಮನಸೋತು ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬAತು.

ಸೋಮವಾರಪೇಟೆಯಲ್ಲಿ ನಡೆದಿದ್ದ ಕ್ವಾರ್ಟರ್ ಪೈನಲ್‌ನಲ್ಲಿ ಕರ್ನಾಟಕವನ್ನು ಸೋಲಿಸಿದ್ದ ಚಂಡೀಗಢ ತಂಡದ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳು ಇದ್ದವಾದರೂ ಅದನ್ನು ಉಳಿಸಿಕೊಳ್ಳಲು ಆ ತಂಡದ ಆಟಗಾರರು ಆರಂಭದಲ್ಲೇ ವಿಫಲರಾದದರು. ಪಂದ್ಯಾಟ ಶುರುವಿನಿಂದಲೇ ಜಾರ್ಖಂಡ್ ಪರ ಏಕಪಕ್ಷೀಯವಾಗಿದ್ದಂತೆ ಕಂಡು ಬಂತು. ಆಟದ ಹೆಚ್ಚಿನ ಅವಧಿಯಲ್ಲಿ ಚೆಂಡು ಚಂಡೀಗಢಕ್ಕೆ ಅಪಾಯಕಾರಿ ರೀತಿಯಲ್ಲೇ ಮೈದಾನದಲ್ಲಿ ಓಡಾಡುತ್ತಿತ್ತು.

ಪಂದ್ಯ ಶುರುವಾದ ಮೊದಲನೇ ನಿಮಿಷದಲ್ಲೇ ಜಾರ್ಖಂಡ್ ಪರ ಸುಶ್ಮಿತಾ ಲಕ್ರಾ ಮೊದಲ ಗೋಲ್ ದಾಖಲಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಟ್ಟರು. ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಲು ಸಿಕ್ಕಿದ ಅವಕಾಶಗಳನ್ನೆಲ್ಲಾ ಜಾರ್ಖಂಡ್ ಯಶಸ್ವಿಯಾಗಿ ಬಳಸಿಕೊಂಡಿತು. ಆದರೆ ಕರ್ನಾಟಕದ ಎದುರು ಪ್ರದರ್ಶಿಸಿದ್ದ ಆಟ ಚಂಡೀಗಢ ತಂಡದಿAದ ಫೈನಲ್‌ನಲ್ಲಿ ಕಂಡು ಬರಲಿಲ್ಲ.

ಜಾರ್ಖಂಡ್ ಪರ ಆಡಿದ ಜಮುನಾ ಕುಮಾರಿ ಪ್ರೇಕ್ಷಕರ ಕಣ್ಮಣಿ ಆಗಿದ್ದರು. ಮೈದಾನ ಒಂದು ತುದಿಯಿಂದ ಇನ್ನೊಂದು ತುದಿಗೆ ಚುರುಕಿನಿಂದ ಓಡುತ್ತಾ ಗಮನ ಸೆಳೆದರು. ಗೋಲ್ ಗಳಿಸಲು ತನಗೆ ಸಿಕ್ಕಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಂಡದ ಗೆಲುವಿಗೆ ದೊಡ್ಡ ಕಾಣಿಕೆ ನೀಡಿದಳು.

ತಂಡದೊಳಗಿನ ಪರಸ್ಪರ ಹೊಂದಾಣಿಕೆ ಆಟ, ಎದುರಾಳಿ ತಂಡಕ್ಕೆ ಬಾಲ್ ಸಿಗದಂತೆ ಮುನ್ನಡಿಸಿಕೊಂಡು ಹೋಗುವಲ್ಲಿ ಪ್ರದರ್ಶಿಸಿದ ಚಾಕಚಕ್ಯತೆ, ಆಟವನ್ನು ತಾಂತ್ರಿಕವಾಗಿ ಎದುರಿಸಿದ ರೀತಿ ಜಾರ್ಖಂಡ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಆದರೆ ಚಂಡೀಗಢ ತಂಡದ ಆಟಗಾರರಲ್ಲಿ ಚುರುಕುತನ ಕಂಡು ಬಂದರೂ ಸಮನ್ವಯತೆಯ ಕೊರತೆ ಇದ್ದಂತಿತ್ತು. ಪೆನಾಲ್ಟಿ ಕಾರ್ನರ್ ಅವಕಾಶಗಳು ಸಿಕ್ಕಿದರೂ ಗೋಲ್ ಆಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದು ಕೂಡ ದೊಡ್ಡ ಬೆಲೆ ತೆರುವಂತೆ ಮಾಡಿತು.

ಫೈನಲ್ ಪಂದ್ಯ ಎಂದ ಕೂಡಲೇ ಭಾರೀ ಪೈಪೋಟಿಯ ನಿರೀಕ್ಷೆ ಇಟ್ಟುಕೊಂಡು ಆಟ ನೋಡಲು ಬಂದಿದ್ದ ಕೊಡಗಿನ ಹಾಕಿ ಪ್ರೇಮಿಗಳು ಪಂದ್ಯಾವಳಿಯ ಮೊದಲಾರ್ಧದಲ್ಲೇ ನಿರಾಸೆ ಅನುಭವಿಸಿದರು. ಜಾರ್ಖಂಡ್ ಪರ ನಾಲ್ಕು ಗೋಲುಗಳು ದಾಖಲಾಗುತ್ತಿದ್ದಂತೆಯೇ ಹೆಚ್ಚಿನವರು ಗ್ಯಾಲರಿಯಿಂದ ತೆರಳಲಾರಂಭಿಸಿದರು. ಕೊನೆಗೆ ಜಾರ್ಖಂಡ್ ತಂಡ 7-1 ಗೋಲ್‌ಗಳ ಅಂತರದಿAದ ಚಾಂಪಿಯನ್ ಪಟ್ಟ ಗಳಿಸಿ ಕಪ್ ಎತ್ತಿ ಹಿಡಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net