ಜೆ.ಎಚ್.ಪಟೇಲರ ಕಾರ್ಯ ಸ್ಮರಣೀಯ

JH Patel's work is memorable
ಕೂಡಲಸಂಗಮದಲ್ಲಿ ಜೆ.ಎಚ್.ಪಟೇಲರ ಪುಣ್ಯಸ್ಮರಣೆ ನಿಮಿತ್ತ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸಲಾಯಿತು. ಮಾಜಿ ಶಾಸಕ ಮಹಿಮಾ ಪಟೇಲ, ಜಿ.ಜಿ.ಪಾಟೀಲ, ಎಲ್.ಎಂ.ಪಾಟೀಲ, ಬಸವರಾಜ ಕಳ್ಳಿ ಇತರರಿದ್ದರು.
Published on

ಕೂಡಲಸಂಗಮ: ಗ್ರಾಮಸ್ಥರು ಹಾಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಿಬ್ಬಂದಿ ಜೆ.ಎಚ್.ಪಟೇಲರ ಪುಣ್ಯಸ್ಮರಣೆ ಮಾಡುತ್ತಿರುವುದು ಹರ್ಷ ಉಂಟುಮಾಡಿದೆ ಎಂದು ಮಾಜಿ ಶಾಸಕ ಮಹಿಮಾ ಪಟೇಲ ಹೇಳಿದರು.

ಗ್ರಾಮದ ಸಂಗಮೇಶ್ವರ ದೇವಾಲಯ ಹೊರ ಆವರಣದಲ್ಲಿನ ದಿ.ಜೆ.ಎಚ್.ಪಟೇಲ ಅವರ ಪುತ್ಥಳಿಗೆ ಪುಷ್ಪಾರ್ಪಣೆ ಮಂಗಳವಾರ ಅವರು ಮಾತನಾಡಿದರು.
ಕೂಡಲಸಂಗಮ ಅಭಿವೃದ್ಧಿಗೆ ದಿ.ಜೆ.ಎಚ್.ಪಟೇಲರ ಕೊಡುಗೆ ಅಪಾರವಾಗಿದೆ. ಅವರ ಕಾರ್ಯವನ್ನು ಮೆಚ್ಚಿ ಅಭಿಮಾನ ಮುಂದುವರಿಸಿ ಸ್ಮರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ.ಪಾಟೀಲ, ರಾಜ್ಯ ಸಹಕಾರಿ ಮಹಾಮಂಡಳದ ಮಾಜಿ ನಿರ್ದೇಶಕ ಎಲ್.ಎಂ.ಪಾಟೀಲ, ಕೂಡಲಸಂಗಮ ಅಭಿವೃದ್ಧಿ ಮಂಡಳಿ ಬಸವರಾಜ ಕಳ್ಳಿ, ಪ್ರಭು ಪುರಾಣಿಕ, ಮಹಾಂತೇಶ ಭದ್ರಶೆಟ್ಟಿ, ವಿಜಯ ಕೋಟೂರ, ಕಪ್ಪಯ್ಯ ಯಡಹಳ್ಳಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net