ಶಿಕ್ಷಣದೊಂದಿಗೆ ಅನ್ನ ದಾಸೋಹ,  ಎನ್ಎಸ್ಎಸ್ ಜೆಜಿಸಿಸಿ ಅಕ್ಷಯ ಪಾತ್ರೆ

IMG_20241123_205138_724.jpg
Published on

ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯವು ಶೈಕ್ಷಣಿಕ ಸಾಧನೆಗಳ ಜತೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಎನ್ಎಸ್ಎಸ್ ಘಟಕದ ವತಿಯಿಂದ 2024& 25ನೇ ಸಾಲಿನ ಆಗಸ್ಟ್ ನಿಂದ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿ ಹಾಗೂ ಸ್ವಯಂ ಸೇವಕರ ಸಹಕಾರದಿಂದ ಪ್ರತಿ ಶನಿವಾರ ಹಸಿದವರಿಗೆ ಅನ್ನ ನೀಡುವ ಕಾರ್ಯ ಮಾಡಲಾಗುತ್ತಿದೆ.

ವಿದ್ಯಾಥಿರ್ಗಳು ತರಕಾರಿ, ಅನ್ನ ಪ್ರಸಾದಕ್ಕೆ ಬೇಕಾದ ಸಾಮಾಗ್ರಿಗಳನ್ನು ತಂದು ತಾವೇ ತಯಾರು ಮಾಡಿದ ಅಡುಗೆಯನ್ನು ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ, ಹುಬ್ಬಳ್ಳಿ- ಧಾರವಾಡದ ಕೆಎಂಸಿ, ಹೊಸೂರ ಬಸ್ ಸ್ಟಾಪ್, ರೈಲ್ವೆ ಸ್ಟೇಷನ್ ಮತ್ತು ವಿವಿಧ ದೇವಸ್ಥಾನಗಳ ಬಳಿ ಜನರಿಗೆ ವಿತರಣೆ ಮಾಡುತ್ತಾರೆ.

ಸಂಸ್ಥೆಯ ಆಡಳಿತ ಮಂಡಳಿ ಹಾಗೂ ನಿರ್ದೇಶಕ ಮಂಡಳಿಯ ಸಹಾಯದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಹಸಿದವರಿಗೆ ಅನ್ನ ದಾಸೋಹ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಪ್ರೊ. ಎಸ್.ಎಲ್. ಪಾಟೀಲ, ಪದವಿ ಪೂರ್ವ ಪ್ರಾಚಾರ್ಯ ಡಾ. ಡಿ.ಕೆ. ವಾಘಮೂಡೆ, ಕಾರ್ಯಕ್ರಮ ಅಧಿಕಾರಿ ಪ್ರೊ. ಬಿ.ಎಂ. ಹುಬ್ಬಳ್ಳಿ, ಡಾ. ನೇತ್ರಾವತಿ ಗಬ್ಬೂರ, ಸಿಬ್ಬಂದಿ ಅಭಿನಂದಿಸಿದ್ದಾರೆ.

ಈ ಸೇವಾ ಕಾರ್ಯಕ್ಕೆ ಜೆಜಿಸಿಸಿ ಅಕ್ಷಯ ಪಾತ್ರೆ ಎಂದು ನಾಮಕರಣ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net