ಚಿನ್ನಾಭರಣ ದೋಚಿದ ಖದೀಮರು ಕಂಬಿ ಹಿಂದೆ

6-RNR-15
Published on

ಹಾವೇರಿ: ಕುಬೇರ ಯಂತ್ರದ ಮೂಲಕ ಪೂಜೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಇಬ್ಬರು ಖದೀಮರನ್ನು ಇಲ್ಲಿಯ ಸೈಬರ್​ ಕೆಂ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದು ಅವರಿಂದ ಬರೋಬ್ಬರಿ 20.88 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಕುವೆಂಪು ನಗರದ ರಮೇಶ ಎಚ್​. ಹನುಮಂತಪ್ಪ (44) ಹಾಗೂ ಚಿತ್ರದುರ್ಗ ತಾಲೂಕಿನ ಮಾಳಪ್ಪನಹಟ್ಟಿಯ ನಿವಾಸಿ ಗೋಪಾಲ ಗುಗ್ಗಪ್ಪ (18) ಬಂಧಿತ ಆರೋಪಿಗಳು.

ಇವರು ಜೂ. 6ರಂದು ಇನ್​ಸ್ಟಾಗ್ರಾಮನಲ್ಲಿ ಅಸ್ಟ್ರೊಟಾಲ್ಕ್​ ಆ್ಯಪ್​ ಮೂಲಕ ನಗರದ ಎರಡ್ಮೂರು ಕುಟುಂಬದವರು ಪರಿಚಯ ಮಾಡಿಕೊಂಡು "ನಿಮಗೆ ಬೇರೆ ರೀತಿಯ ಕುಂಕುಮ, ಬಂಡಾರ, ತಾಯತಾ ಮತ್ತು ಕುಬೇರ ಯಂತ್ರದ ಪೂಜೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಮಾಡಿಕೊಡುತ್ತೇವೆ' ಎಂದು ನಂಬಿಸಿ ಅವರ ಮನೆಗೆ ಬಂದು ಹೆದರಿಸಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು.

ಈ ಕುರಿತು ಸೈಬರ್​ ಕೆಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಸ್ಪಿ, ಎಎಸ್ಪಿ ಲಕ್ಷ$್ಮಣ ಶಿರಕೋಳ ಮಾರ್ಗದರ್ಶನದಲ್ಲಿ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಆರೋಪಿಗಳಿಬ್ಬರೂ ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ದೇವರಗುಡಿ ಗ್ರಾಮದವರಾಗಿದ್ದು ಬೇರೆ ಬೇರೆ ಕಡೆಗಳಲ್ಲಿ ವಾಸವಾಗಿರುವುದನ್ನು ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ಬೇರೆ ಬೇರೆ ಕಡೆಗೂ ಕಳ್ಳತನ ಮಾಡಿದ್ದ ಒಟ್ಟು 20.88 ಲಕ್ಷ ರೂ. ಮೌಲ್ಯದ 227 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಸೈಬರ್​ ಕೆಂ ಠಾಣೆ ಸಿಪಿಐ ಶಿವಶಂಕರ ಗಣಾಚಾರಿ, ಪಿಎಸ್​ಐ ಎಂ.ಎ್​. ದುರ್ಗಪ್ಪನವರ, ಸಿಬ್ಬಂದಿಗಳಾದ ಎಚ್​.ಎಂ. ಗಾಜಿಗೌಡ್ರ, ಡಿ.ಎಸ್​. ಬಿಲ್ಲರ, ಮಹೇಶ ಹೊರಕೇರಿ, ಆನಂದ ದೊಡ್ಡಕುರುಬರ, ಪರಶುರಾಮ ಲಮಾಣಿ, ಮಾಲತೇಶ ಹಟ್ಟಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net