

ರಾಯಚೂರು ಕಳೆದ ಹೋಗಿದ್ದ ಆಭರಣಗಳನ್ನು ಕೇವಲ ೦೪ ಗಂಟೆಯಲ್ಲಿ ಸದರ್ ಬಜಾರ್ ಠಾಣೆಯ ಪೋಲಿಸರು ಪತ್ತೆ ಹಚ್ಚಿದ್ದು ಶ್ಲಾಘನೀಯವಾಗಿದೆಂದು ಎಸ್ಪಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗಳ ಕಾರ್ಯಾಲಯದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಶಕ್ತಿ ನಗರದ ಕರಾಟೆ ಶಿಕ್ಷಕಿ ಲಕ್ಷ್ಮೀ ಎಂಬುವವರು ನಗರದ ಕೇಂದ್ರ ಬಸ್ ನಿಲ್ದಾಣದಿಂದ ತೀನ್ ಕಂದಿಲ್‌ಗೆ ಏ.೨೨ ರಂದು ಆಟೋದಲ್ಲಿ ಆಗಮಿಸಿದ್ದರು, ಒಡವೆಯಿದ್ದ ಆಟೋದಲ್ಲಿ ಬ್ಯಾಗ್ ಮರೆತು ಹೋಗಿದ್ದರು ತದ ನಂತರ ಸದರ್ ಬಜಾರ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ತಕ್ಷಣದಲ್ಲಿ ಕಾರ್ಯಾಚರಣೆ ನಡೆಸಿದರು.
ದೂರು ದಾಖಲಾದ ಕೇವಲ ೦೪ ಗಂಟೆಯಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಿರುವ ಸಿಸಿ ಕ್ಯಾಮರಾ ಸಹಾಯದಿಂದ ಆಟೋ ಪತ್ತೆ ಹಚ್ಚಿ ಕಳೆದು ಹೋದ ೧೭ ಗ್ರಾಂ ಬಂಗಾರದ ಒಡವೆ, ೩೩ ತೊಲೆ ಆಭರಣ ಮತ್ತು ಒಂದು ಸಾವಿರ ನಗದು ಒಟ್ಟು ೧.೯೫ ಲಕ್ಷ. ರೂ ಮೌಲ್ಯ ಪತ್ತೆ ಹಚ್ಚಿ ಮಾಲೀಕರಿಗೆ ಒಪ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶಾಂತವೀರ್, ಸದರ್ ಬಜಾರ್ ಪಿಐ ಉಮೇಶ್ ಕಾಂಬ್ಳೆ, ಅಪರಾಧ ವಿಭಾಗದ ಪಿಎಸ್‌ಐ ನರಸಮ್ಮ, ಪೇದೆಗಳಾದ ವೆಂಕಟೇಶ್, ರವಿಕುಮಾರ್, ಶಿವಾನಂದ ಇದ್ದರು.