ಬಂಗಾರದಂಗಡಿ ಕಳ್ಳತನ

SIRSI THEFT
Published on

ಶಿರಸಿ: ಬಂಗಾರದ ಅಂಗಡಿ ಬಾಗಿಲು ಒಡೆದು ಕೌಂಟರ್​ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಕದ್ದ ಘಟನೆ ತಾಲೂಕಿನ ದಾಸನಕೊಪ್ಪದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಇಲ್ಲಿಯ ಜೀವನ ಚಂದ್ರಹಾಸ ಶೇಟ್ ಅವರ ಬಂಗಾರದಂಗಡಿಯಲ್ಲಿ ಕಳ್ಳತನ ನಡೆದಿದೆ.

ಸುಮಾರು 1.20 ಲಕ್ಷ ರೂ. ಬೆಲೆಯ ಬಂಗಾರದ ಮೂಗು ಬೊಟ್ಟು, ಬೆಳ್ಳಿಯ 18 ಸಾವಿರ ರೂ. ಬೆಲೆಯ 200 ಗ್ರಾಂ ಕಾಲು ಗುಂಡು, 13,500 ರೂ. ಬೆಲೆಯ 150 ಗ್ರಾಂ ಕಾಲು ಚೈನ್, 40,500 ರೂ. ಬೆಲೆಯ 450 ಗ್ರಾಂ ಕಾಲು ಸುತ್ತು, 45 ಸಾವಿರ ರೂ. ಬೆಲೆಯ 750 ಗ್ರಾಂ ಹಳೇ ಬೆಳ್ಳಿಯ ಆಭರಣ, 1.17 ಲಕ್ಷ ರೂ. ಬೆಲೆಯ 1.55 ಕೆಜಿ ಬೆಳ್ಳಿ ಆಭರಣ ಕದ್ದೊಯ್ದಿದ್ದಾರೆ.

ಅಂಗಡಿಯ ಪಕ್ಕದ ದತ್ತಾತ್ರೇಯ ದೇವಪ್ಪ ಶೇಟ್ ಅವರ ಅಂಗಡಿಯಲ್ಲೂ ಕಳವಿಗೆ ಯತ್ನ ನಡೆಸಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net