

ಕೊಳ್ಳೇಗಾಲ; ಪಟ್ಟಣದ ಆದರ್ಶನಗರ ಬಡಾವಣೆಯಲ್ಲಿನ ಮನೆಯೊಂದರ ಬಾಗಿಲನ್ನು ದುಷ್ಕರ್ಮಿಗಳು ಹೊಡೆದು ಸುಮಾರು 70 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ.
ಆದರ್ಶ ನಗರದ ನಿವಾಸಿ ಮುಜಾಯಿದ್ ಪಾಷ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮುಜಾಯಿದ್ ಪಾಷ ಕುಟುಂಬ ಸಮೇತ ಜೂ.2ರಂದು ಕೇರಳಕ್ಕೆ ತೆರಳಿದ್ದರು. ವಾಪಸ್ ಮನೆಗೆ ಹಿಂದಿರುಗಿ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ತಿಳಿದಿದೆ.
70 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳು ಕಳವಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಪಟ್ಟಣ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.