

ಬೆಂಗಳೂರು: ಜ್ಯುವೆಲರಿ ಶಾಪ್ನಲ್ಲಿ ಕಳ್ಳತನ ಮಾಡಿದ ಬಂಗಾರವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ನಂದಿನಿ ಲೇಔಟ್ ಪೊಲೀಸರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬಂಧಿತನನ್ನು ಉತ್ತಮ್ ದೋಲಾಯಿ ಎಂದು ಗುರುತಿಸಲಾಗಿದ್ದು, ಆತನಿಂದ 45 ಲಕ್ಷ ರೂ. ಮೌಲ್ಯದ 1 ಕೆ.ಜಿ. 16 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತಮ್ ಇದೇ ಜೂನ್ 8ರ ರಾತ್ರಿ ಅನುಮಾನಸ್ಪದವಾಗಿ ಜ್ಯುವೆಲರಿ ಶಾಪ್ ಬಳಿ ಓಡಾಡುತ್ತಿದ್ದ. ಆರೋಪಿಯ ಜೇಬಿನಲ್ಲಿ ಚಿನ್ನಾಭರಣಗಳು ಇರುವುದನ್ನು ನೋಡಿ ರಾತ್ರಿ ಗಸ್ತಿನಲ್ಲಿ ಪೇದೆ ವಿಚಾರಿಸಿದಾಗ ಆರೋಪಿ ತಬ್ಬಿಬ್ಬಾಗಿದ್ದ. ತಕ್ಷಣವೇ ಆತನನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: VIDEO| ರಾತ್ರಿ ತನ್ನಷ್ಟಕ್ಕೆ ತಾನೇ ವರ್ಕೌಟ್ ಮಾಡುತ್ತಿರೋ ಜಿಮ್ ಯಂತ್ರ: ನಿಗೂಢ ಭೇದಿಸಿದ ಪೊಲೀಸರು!
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಹಲಸೂರ್ ಗೇಟ್ ಬಳಿಯ ಜ್ಯುವೆಲರಿ ಶಾಪ್ ಒಂದಕ್ಕೆ ಚಿನ್ನ-ಬೆಳ್ಳಿ ಕೆಲಸ ಮಾಡುವ ಆಚಾರಿಯಾಗಿ ಕೆಲಸ ಮಾಡುತಿದ್ದ ಆರೋಪಿ ಜ್ಯುವೆಲರಿ ಶಾಪ್ ತೆರದಿರುವ ವೇಳೆ ಹಂತ ಹಂತವಾಗಿ ಕಳ್ಳತನ ಮಾಡ್ತಿದ್ದ. ಚಿನ್ನದ ಗಟ್ಟಿಯ ಸಣ್ಣ ಸಣ್ಣ ಚೂರುಗಳನ್ನು ಕದ್ದು ಸಂಗ್ರಹಿಸುತ್ತಿದ್ದ. ಹೀಗೆ ಒಟ್ಟು ಒಂದು ಕೆಜಿ ಹದಿನಾರು ಗ್ರಾಂ ಕಳ್ಳತನ ಮಾಡಿ, ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. (ದಿಗ್ವಿಜಯ ನ್ಯೂಸ್)