ಚಿನ್ನಾಭರಣ ದೋಚಿದ ಕಳ್ಳರು

21ATHANIGRAMIN3
ಸುಟ್ಟಟ್ಟಿ ಕ್ರಾಸ್ ಬಳಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ ಬೌರವ್ವ ಅವರಿಂದ ಮಾಹಿತಿ ಪಡೆದರು. ಪ್ರಶಾಂತ ಮುನ್ನೋಳ್ಳಿ, ಸಂತೋಷ ಹಳ್ಳೂರ, ಕುಮಾರ ಹಾಡಕರ ಇತರರಿದ್ದರು.
Published on

ಅಥಣಿ ಗ್ರಾಮೀಣ: ಮಟ-ಮಟ ಮಧ್ಯಾಹ್ನವೇ ಯುವಕರಿಬ್ಬರು ಅಥಣಿ ತಾಲೂಕಿನ ಸುಟ್ಟಟ್ಟಿ ಕ್ರಾಸ್, ಹಾಲಳ್ಳಿ ಹಾಗೂ ಚಮಕೇರಿ ಗ್ರಾಮದ ದಾರಿಹೋಕ ಮಹಿಳೆಯರ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬುಧವಾರ ನಡೆದಿದೆ. ತಾಲೂಕಿನ ಸುಟ್ಟಟ್ಟಿ ಕ್ರಾಸ್ ನಿವಾಸಿ ಬೌರವ್ವಾ ನಾವಿ 10 ಗ್ರಾಂ, ಹಾಲಳ್ಳಿಯ ಗೌರವ್ವ ಕಲಶೆಟ್ಟಿ 20 ಗ್ರಾಂ ಹಾಗೂ ಚಮಕೇರಿಯ ಅಕ್ಕಾತಾಯಿ ಹೊನವಾಡ ಅವರಿಗೆ ಸೇರಿದ 20 ಗ್ರಾಂ ಸೇರಿ ಒಟ್ಟು 4.5 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಈ ಮಹಿಳೆಯರು ಗದ್ದೆ ಕೆಲಸ ಮುಗಿಸಿ ತೋಟದ ಮನೆಗಳಿಗೆ ತೆರಳುವಾಗ ಇಬ್ಬರು ಯುವಕರು ಬೈಕ್ ಮೇಲೆ ಬಂದು ಮಾಹಿತಿ ಕೇಳುವ ನೆಪದಲ್ಲಿ ಆಭರಣ ದೋಚಿದ್ದಾರೆ. ಈ ಕುರಿತು ಐಗಳಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಐಗಳಿ ಪಿಎಸ್‌ಐಗಳಾದ ಕುಮಾರ ಹಾಡಕರ, ಚಂದ್ರಶೇಖರ ಸಾಗನೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net