ಚಿನ್ನಾಭರಣ ಕಳ್ಳತನ, ಐಟಿ ಉದ್ಯೋಗಿ-ಅಟೆಂಡರ್ ಅಂದರ್ !

shimogga police
ಭದ್ರಾವತಿ ನ್ಯೂಟೌನ್ ಮತ್ತು ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಜಪ್ತಿ ಮಾಡಿದ ಚಿನ್ನಾಭರಣವನ್ನು ಎಸ್ಪಿ ಜಿ.ಕೆ.ಮಿಥನ್‌ಕುಮಾರ್ ಶಿವಮೊಗ್ಗ ಡಿಎಆರ್ ಸಭಾಂಗಣದಲ್ಲಿ ಪ್ರದರ್ಶಿಸಿದರು. ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ, ನಾಗರಾಜ್, ಶ್ರೀಶೈಲಕುಮಾರ್, ಟಿ.ರಮೇಶ್, ಕೃಷ್ಣಕುಮಾರ ಬಿ. ಮಾನೆ ಇದ್ದರು.
Published on

ಶಿವಮೊಗ್ಗ: ಭದ್ರಾವತಿಯ ನ್ಯೂಟೌನ್ ಮತ್ತು ಹೊಸಮನೆ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಚಿನ್ನಾಭರಣ ಕಳವು ಪ್ರಕರಣಗಳಲ್ಲಿ ಐಟಿ ಉದ್ಯೋಗಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 36.59 ಲಕ್ಷ ರೂ. ಮೌಲ್ಯದ 535.75 ಗ್ರಾಂ ಚಿನ್ನಾಭರಣ ಹಾಗೂ 16 ಸಾವಿರ ರೂ. ಮೌಲ್ಯದ ಎರಡು ರೇಷ್ಮೆ ಸೀರೆಗಳನ್ನು ಜಪ್ತಿ ಮಾಡಿದ್ದಾರೆ.

ದಾವಣಗೆರೆ ಮೂಲದ, ಭದ್ರಾವತಿಯ ಹೊಸ ಸೀಗೆಬಾಗಿ ನಿವಾಸಿ ಕಮಲಮ್ಮ (48) ಮತ್ತು ಹೊಸಮನೆ ಕೇಶವಾಪುರ ಬಡಾವಣೆ ನಿವಾಸಿ, ಐಟಿ ಸಂಸ್ಥೆಯ ಉದ್ಯೋಗಿ ಎಸ್.ಎಸ್.ನಿತಿನ್ (27) ಬಂಧಿತರು. ಕಮಲಮ್ಮ ಖಾಸಗಿ ಸಂಸ್ಥೆಯ ಅಟೆಂಡರ್ ಕೆಲಸ ಮಾಡುತ್ತಿದ್ದರು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡೂ ಪ್ರಕರಣಗಳು ಕ್ಲಿಷ್ಟಕರವಾಗಿದ್ದವು. ನ್ಯೂಟೌನ್ ಮತ್ತು ಹೊಸಮನೆ ಠಾಣೆ ಪೊಲೀಸರು ಭೇದಿಸಿದ್ದಾರೆ. ನ್ಯೂಟೌನ್ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣದ ಆರೋಪಿಯನ್ನು ಎರಡೇ ದಿನದಲ್ಲಿ ಬಂಧಿಸಲಾಗಿದೆ. ಪ್ರಕರಣದಲ್ಲಿ ದೂರದಾರರ ನಿರ್ಲಕ್ಷೃವೂ ಎದ್ದುಕಾಣುತ್ತಿದೆ. ಹೊಸಮನೆ ಪ್ರಕರಣದಲ್ಲಿ ಸಂಬಂಧಿಯೇ ಕಳ್ಳತನ ಮಾಡಿದ್ದು, ಯಾವುದೇ ಸುಳಿವು ಇಲ್ಲದಿದ್ದರೂ ಸಿಬ್ಬಂದಿಯ ಚಾಣಾಕ್ಷತನದಿಂದ ಕಳ್ಳ ಸಿಕ್ಕಿಬಿದ್ದಿದ್ದಾನೆ ಎಂದು ಹೇಳಿದರು.

ಎಎಸ್ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ, ಡಿವೈಎಸ್ಪಿ ನಾಗರಾಜ್, ಇನ್‌ಸ್ಪೆಕ್ಟರ್ ಶ್ರೀಶೈಲಕುಮಾರ್, ಪಿಎಸ್‌ಐಗಳಾದ ಟಿ.ರಮೇಶ್, ಕೃಷ್ಣಕುಮಾರ ಬಿ. ಮಾನೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net