ಮಂಡ್ಯದ ದ್ವಾರಕನಗರದಲ್ಲಿ ಕಳ್ಳತನ: ಮನೆಯೊಳಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ ಖದೀಮರು

udp-theft
Published on
ಮಂಡ್ಯ: ಇಲ್ಲಿನ ದ್ವಾರಕನಗರ ೩ನೇ ಕ್ರಾಸ್‌ನ ಮನೆಯೊಂದರಲ್ಲಿ ಕಳ್ಳರು ನಗದು ಹಾಗೂ ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ರವಿಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಎರಡು ದಿನಗಳ ಕಾಲ ಯಾರೂ ಇರಲಿಲ್ಲ. ಇದನ್ನು ಗಮನಿಸಿರುವ ಕಳ್ಳರು, ಮುಖ್ಯ ದ್ವಾರದ ಬಾಗಿಲನ್ನು ಹಾರೆಯಿಂದ ಮೀಟಿ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಬೀರುವಿನಲ್ಲಿದ್ದ 50 ಸಾವಿರ ರೂ. ನಗದು, 250 ಗ್ರಾಂ ತೂಕದ ಬೆಳ್ಳಿ ಮುಖವಾಡ, 3 ಗ್ರಾಂ ತೂಕದ ಚಿನ್ನದ ತಾಳಿಯನ್ನು ಕಳವು ಮಾಡಿದ್ದಾರೆ.
ರವಿಕುಮಾರ್ ಮತ್ತು ಕುಟುಂಬದವರು ಸೋಮವಾರ ಮನೆಗೆ ವಾಪಾಸ್ಸಾದಾಗ ಮನೆಯಲ್ಲಿ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ನಗದು ಕಳುವಾಗಿರುವ ವಸ್ತುಗಳ ಮೌಲ್ಯ 80 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಮಂಡ್ಯ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಪ್ರಸಾದ್‌ರಾವ್, ಪಿಎಸ್‌ಐ ಮಹೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net