

ಹುಬ್ಬಳ್ಳಿ: ಗಾಂಧೀದಾಮ್ ಎಕ್ಸಪ್ರೆಸ್ ರೈಲಿನಲ್ಲಿ ನಗರದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿದ್ದ 2.32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾದ ಘಟನೆ ನಡೆದಿದೆ. 30 ಗ್ರಾಂ ಬಳೆ, 8 ಗ್ರಾಂ ರಿಂಗ್, 6 ಐಪೋನ್ವೊಬೈಲ್ ಫೋನ್ ಸೇರಿ ವಿವಿಧ ದಾಖಲೆಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಮಹಿಳೆಯು, ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.