ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿನ್ನಾಭರಣ ಕಳವು

doddapete-police-station
ಶಿವಮೊಗ್ಗ ದೊಡ್ಡಪೇಟೆ ಠಾಣೆ
Published on

ಶಿವಮೊಗ್ಗ: ಶಿವಮೊಗ್ಗದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದಾವಣಗೆರೆಗೆ ತೆರಳುವಾಗ ಬ್ಯಾಗ್‌ನಲ್ಲಿದ್ದ 53,800 ರೂ. ಮೌಲ್ಯದ ಚಿನ್ನದ ಆಭರಣ ಕಳವು ಮಾಡಲಾಗಿದೆ.

ನಗರದ ಮದಾರಿಪಾಳ್ಯದ ಮೊಹಮ್ಮದ್ ಮುಹೀಬುಲ್ಲಾ ಎಂಬುವರು ಚಿನ್ನಾಭರಣ ಕಳೆದುಕೊಂಡವರು. ಪತ್ನಿ ಮತ್ತು ಪುತ್ರನೊಂದಿಗೆ ದಾವಣಗೆರೆಗೆ ಹೊರಟಿದ್ದು ಟಿಕೆಟ್ ಪಡೆಯಲು ಬ್ಯಾಗ್‌ನಲ್ಲಿದ್ದ ಹಣ ತೆಗೆಯುವಾಗ ಚಿನ್ನಾಭರಣ ಕಳವು ಆಗಿರುವುದು ಬೆಳಕಿಗೆ ಬಂದಿದೆ.
ಮೂವರು ಬಸ್ ಹತ್ತಿ ಬುದ್ಧನಗರ ಕಡೆಯಿಂದ ಬಸ್ ನಿಲ್ದಾಣದ ಬಳಿ ಹೊರಬರುತ್ತಿದ್ದಂತೆ ಟಿಕೆಟ್ ತೆಗೆಯುವ ವೇಳೆ ಎರಡು ರೂ. ಚಿಲ್ಲರೆ ಕಡಿಮೆ ಆಗಿದ್ದರಿಂದ ಪತ್ನಿ ಬಳಿ ಕೇಳಿದ್ದರು. ಚಿಲ್ಲರೆಗಾಗಿ ಅವರ ಪತ್ನಿ ವ್ಯಾನಿಟಿ ಬ್ಯಾಗ್ ತೆಗೆದಾಗ 37,500 ರೂ. ಮೌಲ್ಯದ ಚಿನ್ನದ ಉಂಗುರ, 16,300 ರೂ. ಮೌಲ್ಯದ ಕಿವಿ ಓಲೆ ಕಳುವಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net