

ಬೆಂಗಳೂರು: 'ಫ್ಯಾಷನ್ ಸ್ಟೋರ್ ಎಕ್ಸಿಬಿಷನ್' ಸಂಸ್ಥೆಯು ದಸರಾ ಮತ್ತು ದೀಪಾವಳಿ ಹಿನ್ನೆಲೆಯಲ್ಲಿ 27ರಿಂದ 29ರವರೆಗೆ ಅರಮನೆ ಮೈದಾನದ ಕಿಂಗ್ಸ್ಕೋರ್ಟ್ನಲ್ಲಿ ಭಾರತೀಯ ಆಭರಣ ಮತ್ತು ಲೈಫ್‌ಸ್ಟೈಲ್ ಮೇಳವನ್ನು ಆಯೋಜಿಸಿದೆ. ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ನಡೆಯಲಿರುವ ಮೇಳದಲ್ಲಿ 100ಕ್ಕೂ ಹೆಚ್ಚು ಪ್ರಸಿದ್ಧ ಬ್ರ್ಯಾಂಡ್ಗಳು ಒಂದೇ ಸೂರಿನಲ್ಲಿ ತರಹೇವಾರಿ ಅಭರಣ ಮತ್ತು ಗೃಹಾಲಂಕಾರ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಅಲ್ಲದೆ ವಿಶಿಷ್ಟ ವಿನ್ಯಾಸದ ಉಡುಗೆಗಳು ಜನಮನ ಸಭೆಯಲಿವೆ ಎಂದು ಮೇಳದ ಆಯೋಜಕ ರವಿ ಅರೋರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ: ಪೌರ ಕಾರ್ವಿುಕರನ್ನು ಸನ್ಮಾನಿಸಿದ ಶಾಸಕ ಟೆಂಗಿನಕಾಯಿ
2012ರಲ್ಲಿ ಸ್ಥಾಪಿಸಲಾದ ಫ್ಯಾಷನ್ ಸ್ಟೋರ್ ಎಕ್ಸಿಬಿಷನ್, ದಕ್ಷಿಣ ಭಾರತದಲ್ಲಿ ಈವರೆಗೆ ನೂರಕ್ಕೂ ಹೆಚ್ಚು ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ನಡೆಸಿ ಅಪಾರ ಅನುಭವ ಗಳಿಸಿದೆ. ಮೂರು ದಿನಗಳ ಕಾಲ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಮೇಳ ತೆರೆದಿರಲಿದೆ. ನಿತ್ಯ ಮೂವರು ಗ್ರಾಹಕರನ್ನು ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತದೆ ಎಂದು ರವಿ ಅರೋರ ತಿಳಿಸಿದರು.
ಕನ್ನಡ ಚಿತ್ರನಟಿ ಶರಣ್ಯ ಶೆಟ್ಟಿ ಮೇಳದ ಕರಪತ್ರ ಅನಾವರಣ ಮಾಡಿದರು. ಎ7 ಎಂಟರ್‌ಟೇನ್‌ಮೆಂಟ್ ಮಾಲೀಕ ಅಜಯ್ ಪ್ರತಾಪ್ ಸಿಂಗ್, ಡಿಸೈನರ್ ಮೇಘ ಅರೋರ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪೌರಕಾರ್ಮಿಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲಿ
ಮೇಳದಲ್ಲಿ ಆಭರಣ, ಬಟ್ಟೆ ಇನ್ನಿತರ ಗೃಹಪಯೋಗಿ ವಸ್ತುಗಳು ಒಂದೇ ಸೂರಿನಡಿ ರಿಯಾಯಿತಿ ದರದಲ್ಲಿ ದೊರೆಯಲಿವೆ. ಪ್ರವೇಶ ಉಚಿತವಾಗಿದ್ದು, ದಸರಾ, ದೀಪಾವಳಿ ಹಬ್ಬದ ಖರೀದಿಗಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ನಿಮಗೆ ಇಷ್ಟವಾದ ವಸ್ತುಗಳನ್ನು ಖರೀದಿ ಮಾಡಬಹುದು. | ಶರಣ್ಯ ಶೆಟ್ಟಿ, ಚಿತ್ರನಟಿ https://www.vijayavani.net/check-out-the-sslc-marks-card-of-jaggesh