ಮೈಸೂರಿನಲ್ಲಿ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ನಿಂದ ಆಭರಣ ಮೇಳ

WhatsApp Image 2024-11-08 at 7.53.39 PM
Published on

ಮೈಸೂರು: ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ನಗರದ ಹೊಟೇಲ್ ಗ್ರ್ಯಾಂಡ್ ಮಕ್ರ್ಯೂರ್‌ನ ನೆಲಮಹಡಿಯಲ್ಲಿರುವ ದಿ ರೀಜೆಂಟ್ ಹಾಲ್ನಲ್ಲಿ ಹಮ್ಮಿಕೊಂಡಿರುವ ಆಕರ್ಷಕ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಮೇಳ ನ.11ರವರೆಗೆ ನಡೆಯಲಿದೆ.

ಸಾಂಪ್ರದಾಯಿಕ ಮತ್ತು ಸಮಕಾಲೀನವಾದ ಆಭರಣಗಳ ಸಂಗ್ರಹದ ವಿಶಿಷ್ಟ ಶ್ರೇಣಿಯೊಂದಿಗೆ ಶುದ್ಧ ಚಿನ್ನ ಮತ್ತು ರತ್ನಗಳು ಹಾಗೂ ಅತ್ಯುತ್ತಮ ಕರಕುಶಲತೆಯೊಂದಿಗೆ ಸಿದ್ಧಪಡಿಸಲಾದ ಮನಮೋಹಕ ಆಭರಣಗಳು ಇಲ್ಲಿ ಪ್ರದರ್ಶನಗೊಂಡಿದೆ. ಆಭರಣಗಳ ಪ್ರದರ್ಶ ನಕ್ಕೆ ನಟಿ ರೋಶಿನಿ ಪ್ರಕಾಶ್ ಚಾಲನೆ ನೀಡಿದರು.

ಅಪರೂಪದ ಆಭರಣದ ಸಂಗ್ರಹಗಳು, ವೈಢೂರ್ಯ, ಸಿಟ್ರಿನ್, ಮುತ್ತುಗಳು, ಹರಳು, ಮಾಣಿಕ್ಯಗಳಂತಹ ಅಪರೂಪವಾದ ವಜ್ರಗಳೊಂದಿಗೆ ಆಕರ್ಷಕ ವಿನ್ಯಾಸಗಳನ್ನು ಮೇಳ ಹೊಂದಿವೆ. ‘ಕ್ರಾೃಶ್ ಕ್ಲಬ್’ ಪ್ರಮುಖ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಫ್ಯಾಶನ್ ಬೆಳ್ಳಿ ಆಭರಣ ಬ್ರ್ಯಾಂಡ್ ಆಗಿದೆ. ಇದರ ಬೆಲೆ 599 ರೂ.ಗಳಿಂದ ಆರಂಭಗೊಳ್ಳಲಿದೆ. ಸಿಕೆಸಿಯ ಲ್ಯಾಬ್ ಗ್ರೋನ್ ಡೈಮಂಡ್ಸ್ ಹೃದಯಭಾಗದಲ್ಲಿ ಒಂದು ಉತ್ತಮ ನಿರೂಪಣೆಯಾಗಿದೆ. ಕಾಸ್ಮಿಕ್ ಅದ್ಭುತ ಮತ್ತು ಸೊಗಸಾದ ಕರಕುಶಲತೆಯ ಸಮ್ಮಿಳಿತ ಇದರಲ್ಲಿದೆ.

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನಿಂದ ‘ವಾಹ್ 1869’ ಆಫರ್‌ಅನ್ನು ಪರಿಚಯಿಸಲಾಗಿದೆ. ವಿಶೇಷ ಕೊಡುಗೆಗಳೆಂದರೆ, ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ಉತ್ಪನ್ನಗಳ ಮೇಲೆ ಶೇ.3 ರಷ್ಟು ರಿಯಾಯಿತಿ, ವಜ್ರಗಳು ಮತ್ತು ವಜ್ರಗಳ ಆಭರಣಗಳ ಮೇಲೆ ಶೇ.6 ರಷ್ಟು, 1 ಸಿಟಿ ಮತ್ತು ಅದಕ್ಕಿಂತ ಹೆಚ್ಚಿನ ವಜ್ರದ ಸಾಲಿಟೇಗಳ ಮೇಲೆ ಶೇ.1 ರಷ್ಟು ರಿಯಾಯ್ತಿಯನ್ನು ನೀಡಲಾಗುತ್ತಿದೆ. 18.69 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಜ್ರಾಭರಣ ಮತ್ತು ವಜ್ರದ ಕುಂದನ್ ಸೆಟ್‌ನ ಆಭರಣಗಳನ್ನು ಖರೀದಿಸಿದರೆ (ಅಥವಾ ಒಂದೇ ದಿನದಲ್ಲಿ ಈ ಮೊತ್ತದ ಒಂದೇ ಬಿಲ್ ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ಗಳ ವಹಿವಾಟಿನ ಮೇಲೆ) ಶೇ.18.69 ರಷ್ಟು ರಿಯಾಯ್ತಿಯನ್ನು ಪಡೆಯಬಹುದಾಗಿದೆ. ಅದೇ ರೀತಿ 18.69 ಲಕ್ಷ ರೂಪಾಯಿ ಮೊತ್ತದ ಕುಂದನ್ ವೆಲೈ ಆಭರಣಗಳನ್ನು ಖರೀದಿಸಿದರೆ ಶೇ.18.69 ರಷ್ಟು ರಿಯಾಯ್ತಿಯನ್ನು ನೀಡಲಾಗುತ್ತದೆ. ಇದಲ್ಲದೇ, ಆಭರಣಗಳ ಬಿಡಿಭಾಗಗಳು ಮತ್ತು ಬಿಡಿಯಾದ ರತ್ನದ ಕಲ್ಲುಗಳ ಮೇಲೆ ಶೇ.6 ರಷ್ಟು ರಿಯಾಯ್ತಿ ಇದ್ದರೆ, ಕ್ರಾೃಶ್ ಕ್ಲಬ್ ಹಾಗೂ ರೇರ್ ಸೆಂಟ್ಸ್‌ನಲ್ಲಿ ನಡೆಸುವ ಎಲ್ಲ ವ್ಯವಹಾರಗಳಿಗೆ ಶೇ.18.69 ರಷ್ಟು ರಿಯಾಯ್ತಿ ದೊರೆಯಲಿದೆ. ಪ್ರತಿ 3 ಸಿಟಿಗಿಂತ ಹೆಚ್ಚಿನ ವಜ್ರಗಳ ಮೇಲೆ ಶೇ.3 ರಷ್ಟು ರಿಯಾಯ್ತಿಗಳಿದ್ದು, ಇದಕ್ಕೆ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ. ಈ ಆಫರ್ ನ.11ರವರೆಗೆ ಲಭ್ಯವಿರಲಿದೆ. ಮಾಹಿತಿಗೆ ಗೋಪಾಲ್ ಸಿಂಗ್ ಮೊ:91 97400 18421 ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net