ನಗ-ನಗದು ಕಳ್ಳತನ

crime
Published on

ಹುಬ್ಬಳ್ಳಿ: ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಖಾಸಗಿ ನಗರ ಸಾರಿಗೆ ಬಸ್ ಹತ್ತುವಾಗ ಕಳ್ಳರು ನೂಕಾಟ ಮಾಡಿ ವ್ಯಾನಿಟಿ ಬ್ಯಾಗ್​ನಲ್ಲಿದ್ದ 28 ಸಾವಿರ ರೂ. ನಗದು, 30 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಕದ್ದಿದ್ದಾರೆ.

ಬೆಳಗಾವಿಯ ಆನಂದನಗರ ಪಾಟೀಲ ಗಲ್ಲಿಯ ಮಹಿಳೆಯು, ನಗರದಲ್ಲಿ ಸಹೋದರಿಯೊಂದಿಗೆ ಬಟ್ಟೆ ಖರೀದಿಸಿದ್ದರು. ಮರಳಿ ಬೆಳಗಾವಿಗೆ ತೆರಳಲೆಂದು ಧಾರವಾಡಕ್ಕೆ ಹೋಗಲು ಬಸ್ ಹತ್ತುವಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net