ಭಾರತೀಯ ಸಂಸ್ಕೃತಿ ಪರಂಪರೆ ಬೆಳೆಸಿ

09-10jvg04
ಜೇವರ್ಗಿ ಶಾಸ್ತ್ರಿ ಚೌಕ್ ಬಡಾವಣೆಯಲ್ಲಿ ರಾಮ ಸೇನೆ ಪ್ರತಿಷ್ಠಾಪಿಸಿದ ಗಣೇಶ ವಿಗ್ರಹ ವಿಸರ್ಜನೆ ಮೆರವಣಿಗೆಯಲ್ಲಿ ಕಾಳಿಶ್ರೀ ಋಷಿಕೇಶ ಕುಮಾರಸ್ವಾಮಿ ಮಾತನಾಡಿದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಮೇಶಬಾಬು ವಕೀಲ, ಅಕ್ಷತಾ ಬಾಜಪೇಯಿ, ರೌಫ್ ಹವಾಲ್ದಾರ್, ಶರಣು ಕೋಳಕೂರ ಇತರರಿದ್ದರು.
Published on

ಜೇವರ್ಗಿ: ಹಿಂದು ರಾಷ್ಟ್ರ ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿದ್ದು, ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಕಾಳಿಶ್ರೀ ಋಷಿಕೇಶ ಕುಮಾರಸ್ವಾಮಿ ನುಡಿದರು.

ಸೋಮವಾರ ಶಾಸ್ತಿç ಚೌಕ್ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ ರಾಮ ಸೇನಾ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರನ್ನು ಒಗ್ಗೂಡಿಸಿ ಸಂಘಟಿತ ಹೋರಾಟಕ್ಕೆ ನಾಂದಿ ಹಾಡಿದ್ದು ಗಣೇಶ ಹಬ್ಬ. ಬಾಲಗಂಗಾಧರ ತಿಲಕ್ ಭಾರತೀಯರನ್ನು ಒಂದುಗೂಡಿಸಲು ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದರು. ರಾಷ್ಟçದ ಹಿತ ಕಾಪಾಡಲು ಹಿಂದುಗಳ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕಾಗಿದೆ ಎಂದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಮೇಶಬಾಬು ವಕೀಲ, ರಾಮ ಸೇನಾ ಪ್ರಧಾನ ಕಾರ್ಯದರ್ಶಿ ಅಕ್ಷತಾ ಬಾಜಪೇಯಿ, ರೌಫ್ ಹವಾಲ್ದಾರ್, ಶರಣು ಕೋಳಕೂರ, ವೀರೇಶ ಪಾಟೀಲ್ ಕಟ್ಟಿಸಂಗಾವಿ, ಬಸವರಾಜ ಪಾಟೀಲ್ ನರಿಬೋಳ, ಬಸಲಿಂಗಪ್ಪ ಬಿರಾದಾರ ವಸ್ತಾರಿ, ನಾಸೀರ್ ಖಾನ್ ನಾಡಗೌಡ, ನಾನಾಗೌಡ ಅಲ್ಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net