

ಜೇವರ್ಗಿ: ಪ್ರವಾದಿ ಮುಹಮ್ಮದ್‌ರ ಚಿಂತನೆಗಳು ಸಾರ್ವಕಾಲಿಕ ಅನ್ವಯವಾಗುತ್ತವೆ. ಅವರ ಚರಿತ್ರೆ ಓದಿದರೆ ಲೋಕದ ಪಾಲಿನ ಅನುಗ್ರಹ ಎಂಬ ದೈವಿಕ ವಾಣಿ ಸತ್ಯವೆನಿಸುತ್ತದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಈದ್ ಮಿಲಾದ್ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ, ಮೆಕ್ಕಾ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮೂಢನಂಬಿಕೆ ತಾಂಡವವಾಡುತ್ತಿದ್ದಾಗ ಶಾಂತಿ, ಸೌಹಾರ್ದತೆ ಮೂಲಕ ಮಾನವೀಯತೆಯ ಹಣತೆಯನ್ನು ಪ್ರಜ್ವಲಿಸಲು ಪ್ರವಾದಿ ಮುಹಮ್ಮದ್ ಅವರು ಶ್ರಮಿಸಿದ್ದಾರೆ. ಎಲ್ಲ ಧರ್ಮಿಯರು ಪರಸ್ಪರ ಸಹೋದರತೆಯಿಂದ ಜೀವನ ನಡೆಸಿದಾಗ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಸೀರತ್ ಕಮಿಟಿ ಅಧ್ಯಕ್ಷ ಮಹ್ಮದ್ ಮೊಹಸಿನ್‌ಸಾಬ್ ಜಾಗಿರದಾರ್, ಉಪಾಧ್ಯಕ್ಷ ರೌಫ್ ಹವಾಲ್ದಾರ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಲಾಲ್ ಹುಸೇನಸಾಬ್ ಕಂದಗಲ್ ಮಾತನಾಡಿದರು. ಹಜರತ್ ಮೌಲಾನಾ ಮೊಹ್ಮದ್ ಜಾವೇದ್ ಅಖ್ತರ್ ಮಿಸ್ಬಾಹಿ, ನೆಲೋಗಿಯ ಶ್ರೀ ಡಾ.ಸಿದ್ಧಲಿಂಗ ಸ್ವಾಮೀಜಿ, ಹಜರತ್ ಮೌಲಾನಾ ಅಲ್-ಹಾಜ್ ತಾಲೀಬ್ ಹುಸೇನ್‌ಸಾಬ್, ಹಜರತ್ ಮೌಲಾನಾ ಮೊಹ್ಮದ್ ಗುಲ್ಜಾರ್ ಅಲಂ ರಿಜವಿ, ವರಜ್ಯೋತಿ ಭಂತೆ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಸಲೀಮ್‌ಸಾಬ್ ಚಿಕುಸೇಠ, ರುಕುಂ ಪಟೇಲ್ ಇಜೇರಿ, ಖಾಸೀಂ ಪಟೇಲ್ ಮುದಬಾಳ, ಅಲ್ಲಾಬಕ್ಷ ಬಾಗಬಾನ್, ಅಮೀರಸಾಬ್ ಜಮಾದಾರ, ಅಬ್ದುಲ್ ಮಾಜಿದ್ ಗಿರಣಿ, ರಮೇಶಬಾಬು ವಕೀಲ, ರಾಜಶೇಖರ ಸೀರಿ, ಮಹಿಬೂಬ್ ಪಟೇಲ್ ಕೊಬಾಳ, ಅಬ್ದುಲ್ ರಹಿಮಾನ್ ಪಟೇಲ್, ಇಜಾಜ್ ನಮಾಜಿ, ರಫೀಕ್ ಜಮಾದಾರ, ಖಾಸೀಂ ಪಟೇಲ್ ಕೂಡಿ, ಇಮ್ರಾನ್ ಕಾಸರಭೋಸಗಾ, ಮೊದ್ದೀನ್ ಇನಾಮದಾರ, ಬಬ್ಲೂ ಇನಾಮದಾರ, ಮಹಿಬೂಬ್ ಪಟೇಲ್ ಇತರರಿದ್ದರು.
ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಅಪಾರ ಯುವಕರು ಪಾಲ್ಗೊಂಡಿದ್ದರು.