ಬಾಲಕಿ ಆತ್ಮಹತ್ಯೆ ಪ್ರಕರಣ ಖಂಡಿಸಿ ಜೇವರ್ಗಿ ಬಂದ್ 16 ರಂದು

Published on

ಮುಖಂಡರಾದ ರಾಜಶೇಖರ ಸಿರಿ  ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಜೇವರ್ಗಿ ತಾಲೂಕಿನಲ್ಲಿ ಇತ್ತೀಚೆಗೆ ಅನ್ಯಕೋಮಿನ ಯುವಕನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ೧೪ ವರ್ಷದ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಲು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭೆಯಿಂದ ಜನವರಿ ೧೬ರಂದು ಜೇವರ್ಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಮಾಜದ ಮುಖಂಡರಾದ ರಾಜಶೇಖರ ಸಿರಿ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ¯್ಲೆಯಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಜಿ¯್ಲÁಡಳಿತ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ, ಜತೆಗೆ ಜಿ¯್ಲÉಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು.

ಈ ಘಟನೆ ನಡೆದರೂ ಕ್ಷೇತ್ರದ ಶಾಸಕರು ಕೇವಲ ಪತ್ರಿಕಾ ಹೇಳಿಕೆ ನೀಡಿz್ದÁರೆ. ಆದರೆ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ, ಜಿ¯್ಲÁ ಉಸ್ತುವಾರಿ ಸಚಿವರೂ ಏನೂ ಮಾಡಿಲ್ಲ. ಮೃತಳ ಕುಟುಂಬಕ್ಕೆ ಸರ್ಕಾರ ೫೦ ಲP್ಷÀ ರೂ.ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡಬೇಕು. ಆತ್ಮಹತ್ಯೆಗೆ ಕಾರಣನಾದ ಅರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಪ್ರತಿಯೊಬ್ಬರನ್ನೂ ಶಿP್ಷÀಗೆ ಗುರಿಮಾಡಬೇಕೆಂದು ಒತ್ತಾಯಿಸಿ ಜನವರಿ ೧೬ರಂದು ನೀಡಲಾಗಿರುವ ಜೇವರ್ಗಿ ಬಂದ್‌ಗೆ ಪಟ್ಟಣದ ಎ¯್ಲÁ ವ್ಯಾಪಾರಿಗಳು, ಅಂಗಡಿ ಮಾಲಿಕರು ಸಹಕರಿಸಬೇಕು ಎಂದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಒಂದು ತಿಂಗಳ ಹಿಂದೆಯೇ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ಕಾಲೇಜು ಆರಂಭ ಮತ್ತು ಬಿಡುವ ಸಂದರ್ಭದಲ್ಲಿ ಪೊಲೀಸ್ ರೌಂಡ್ ಹಾಕಿಸಿ ಕಾಮುಕರಿಗೆ ಬಿಸಿಮುಟ್ಟಿಸಬೇಕು. ಇಂತಹ ಘಟನೆಗಳು ಪದೆ ಪದೆ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಶಿವರಾಜ ಪಾಟೀಲ್ ರz್ದÉÃವಾಡಗಿ, ಸಿದ್ದುಗೌಡ, ವಿಜಯಕುಮಾರ, ಶರಣಬಸಪ್ಪ, ಶಿವಾನಂದ ಸೋಮಶೇಖರ, ರವಿ ಪಡಶೆಟ್ಟಿ, ಡಾ. ಸುಧಾ ಹಾಲಕಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net