ಭಾರಿ ಮಳೆಗೆ ಕಿತ್ಕೊಂಡು ಹೋಯ್ತು ಸೇತುವೆ- ಎಸ್ಸೆಎಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಗ್ನಿಶಾಮಕದಳದ ನೆರವು

Jevargi rain
Published on

ಕಲಬುರಗಿ: ನಿನ್ನೆ ಸುರಿದ ಭಾರಿ ಮಳೆಯಿಂದ ಹಳ್ಳದ ಸೇತುವೆ ಕಿತ್ತು ಹೋದ ಪರಿಣಾಮವಾಗಿ ಅದೇ ಸೇತುವೆಯ ಮೇಲಿಂದ ಪರೀಕ್ಷೆಗೆ ತೆರಳಬೇಕಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆತಂಕಗೊಂಡ ಪ್ರಸಂಗ ನಡೆದಿದೆ.

ಜೇವರ್ಗಿ ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಈ ಪರೀಕ್ಷಾ ಕೇಂದ್ರಕ್ಕೆ ಹೋಗುವ ಏಕೈಕ ದಾರಿ ಈ ಸೇತುವೆಯೇ ಆಗಿದ್ದರಿಂದ ವಿದ್ಯಾರ್ಥಿಗಳು ಬೇರೆ ದಾರಿ ಕಾಣದೆ ಕಂಗಾಲಾಗಿದ್ದರು.

ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಹಗ್ಗ ಮತ್ತು ಏಣಿಯ ವ್ಯವಸ್ಥೆ ಮಾಡಿದರು. ವಿದ್ಯಾರ್ಥಿಗಳು ಹಗ್ಗ ಹಿಡಿದು ಹಳ್ಳ ದಾಟಿ ಪರೀಕ್ಷಾ ಕೇಂದ್ರಕ್ಕೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net