

ಮಂಗಳೂರು : ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ ಅವರು ನಗರದ ಫಾತಿಮಾ ಧ್ಯಾನ ಮಂದಿರದಲ್ಲಿ ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಆರು ಉಪ ಯಾಜಕರುಗಳಿಗೆ ಯಾಜಕ ದೀಕ್ಷೆ ನೀಡಿದರು. ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿ ಫಾ.ಡಯನೀಶಿಯಸ್ ವಾಸ್, ಫಾತಿಮಾ ಧ್ಯಾನ ಮಂದಿರದ ಮುಖ್ಯಗುರು ಫಾ.ಅನಿಲ್ ಡಿಮೆಲ್ಲೊ , ಫಾ. ಆನುಶ್ ಡಿಕುನ್ಹಾ ಮುಂತಾದವರು ಉಪಸ್ಥಿತರಿದ್ದರು. ಫಾ.ಆಲ್ವಿನ್ ಡಿಸೋಜ ಬಲಿಪೂಜೆ ನಿರ್ವಹಿಸಿದರು.