

ಎನ್.ಆರ್.ಪುರ: ಜೇಸಿ ಸಂಸ್ಥೆ ಎಲ್ಲ ಸದಸ್ಯರಿಗೂ ನಾಯಕತ್ವ ಗುಣ ಬೆಳೆಸುವ ಕಾರ್ಖಾನೆಯಾಗಿದೆ ಎಂದು ಜೇಸಿ ಸಂಸ್ಥೆ ಪೂರ್ವಾಧ್ಯಕ್ಷ ಎಚ್.ಎಸ್.ಪೂರ್ಣೇಶ್ ಹೇಳಿದರು.
ರೋಟರಿ ಕ್ಲಬ್‌ನಲ್ಲಿ ನಡೆದ ಜೇಸಿ ಸಂಸ್ಥೆ ಮಾಸಿಕ ಸಭೆಯಲ್ಲಿ ಮಾತನಾಡಿ, ಸಂಸ್ಥೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಅಧ್ಯಕ್ಷರು, ಸದಸ್ಯರು ಭಾಗವಹಿಸಬೇಕು. ಜೇಸಿ ಸಂಸ್ಥೆ ತರಬೇತಿಯನ್ನ ಮೂಲ ಉದ್ದೇಶವನ್ನಾಗಿಟ್ಟುಕೊಂಡು ರಚಿತವಾದ ಸಂಸ್ಥೆಯಾಗಿದೆ. ಮುಂದಿನ ತಿಂಗಳು ಸಂಸ್ಥೆಯಿಂದ ಉತ್ತಮ ಕಾರ್ಯಕ್ರಮಗಳು ಮೂಡಿಬರಬೇಕು ಎಂದು ಸಲಹೆ ನೀಡಿದರು.
ಪಪಂ ಅಧ್ಯಕ್ಷೆ ಜುಬೇದಾ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಜೇಸಿ ಸಂಸ್ಥೆಯಲ್ಲಿ ಅನೇಕ ಪ್ರತಿಭೆಗಳನ್ನು ಗುರುತಿಸಿ ಸಮಾಜ ಸೇವಕರನ್ನ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು. ನಿಕಟಪೂರ್ವ ಅಧ್ಯಕ್ಷ ಎಂ.ಪಿ.ಮನು, ಅಧ್ಯಕ್ಷ ಸಾರ್ಥಕ್ ಗೌಡ, ವಲಯ ಉಪಾಧ್ಯಕ್ಷ ಪ್ರಶಾಂತ್ , ಪ್ರಧಾನ ಕಾರ್ಯದರ್ಶಿ ಮಿಥುನ್ ಗೌಡ, ಜೀವನ್, ಆದರ್ಶಗೌಡ, ರಜಿತ್‌ಗೌಡ, ವಿನೋದ್ ಗೌಡ, ಪವನ್,ವಿನುತ, ವಿನಯ್, ಉದಯ, ವಿಜಯ್ ಇದ್ದರು.