ಶಾಲಾ ವಿದ್ಯಾರ್ಥಿಗಳಿಗೆ ಜರ್ಕೀನ್ ಕೊಡುಗೆ

jarkin vitharane (1)
Published on

ಮಡಿಕೇರಿ: ಮಡಿಕೇರಿ ರೋಟರಿ ವುಡ್ಸ್ ಸಂಸ್ಥೆಯ ವತಿಯಿಂದ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜರ್ಕಿನ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.


ಮಳೆ ಮತ್ತು ಚಳಿಯಿಂದ ಮಕ್ಕಳಿಗೆ ರಕ್ಷಣೆಯನ್ನು ನೀಡುವ ಉದ್ದೇಶದಿಂದ ರೋಟರಿ ವುಡ್ಸ್ ವತಿಯಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಒಟ್ಟು ೪೭ ವಿದ್ಯಾರ್ಥಿಗಳು ಈ ಯೊಜನೆಯ ಉಪಯೋಗ ಪಡೆದುಕೊಂಡರು.


ಕಾರ್ಯಕ್ರಮದಲ್ಲಿ ಮಾತನಾಡಿದ ರೊಟರಿ ವುಡ್ಸ್ ಅಧ್ಯಕ್ಷ ಕಿಗ್ಗಾಲು ಹರೀಶ್, ವಿದ್ಯಾರ್ಥಿಗಳು ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳು ಆರೋಗ್ಯವನ್ನು ಕಾಪಾಡಿಕೊಂಡು ಭವಿಷ್ಯದಲ್ಲಿ ಆರೋಗ್ಯವಂತ ಪ್ರಜೆಗಳಾಗುವಂತೆ ಕರೆನೀಡಿದರು.


ಜರ್ಕೀನ್‌ಗಳನ್ನು ಕೊಡುಗೆಯಾಗಿ ನೀಡಿದ ರೋಟರಿ ವುಡ್ಸ್ ಸಂಸ್ಥೆಯ ನಿರ್ದೇಶಕ ಬಾಲಸುಬ್ರಹ್ಮಣ್ಯ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಣ ಬಹಳ ಮುಖ್ಯ. ಭವಿಷ್ಯದಲ್ಲೂ ಶಾಲೆಗೆ ಕೊಡುಗೆಗಳನ್ನು ನೀಡಲು ತಾನು ಸಿದ್ಧ ಎಂದು ಘೋಷಿಸಿದರು.


ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸವಿತ, ರೋಟರಿ ಮಡಿಕೇರಿ ವುಡ್ಸ್ ನಿರ್ದೇಶಕರಾದ ಭಗತ್ ರಾಜ್, ರಂಜಿತ್ ಕಿಗ್ಗಾಲ್, ರವಿ.ಪಿ, ಲೋಕೇಶ್, ಕಶ್ಯಪ್, ರಾಜೇಶ್ ಚೌಧರಿ ಪ್ರವೀಣ್, ಶಾಲೆಯ ಶಿಕ್ಷಕ ವೃಂದದವರು, ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net