ಜೇರಟಗಿ ರೇವಣಸಿದ್ದೇಶ್ವರ ರಥೋತ್ಸವ ನಾಳೆ

1811KLB15
Published on

ಜೇವರ್ಗಿ: ಮರಿ ಕಲ್ಯಾಣವೆಂದು ಕರೆಸಿಕೊಳ್ಳುವ ಸುಕ್ಷೇತ್ರ ಜೇರಟಗಿಯಲ್ಲಿ ಜಗದ್ಗುರು ಶ್ರೀ ರೇವಣಸಿz್ದÉÃಶ್ವರ ಹಾಗೂ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ತಯಾರಿ ಅಂತಿಮ ಹಂತದಲ್ಲಿವೆ. ೧೫ ದಿನಗಳಿಂದ ಬಸವರಾಜ ಪುರಾಣಿಕ ನಡೆಸಿಕೊಡುತ್ತಿರುವ ರೇವಣಸಿz್ದÉÃಶ್ವರ ಹಾಗೂ ಶಿವಯೋಗಿ ಸಿದ್ದರಾಮೇಶ್ವರ ಮಹಾಪುರಾಣ ಬುಧವಾರ ಅಣ್ಣಾರಾವ ನಿಷ್ಠಿ ದೇಶಮುಖ ಅವರಿಂದ ಜಂಗಮ ಗಣಾರಾಧನೆಯೊಂದಿಗೆ (ಖಾಂಡ) ಮಂಗಲಗೊಳ್ಳಲಿದೆ. ಸಂಜೆ ಚಮ್ಮಾವುಗೆ ಮೆರವಣಿಗೆ ಜರುಗಲಿದೆ. ನ.೨೧ರಂದು ಬೆಳಗ್ಗೆ ೫ಕ್ಕೆ ಪುರವಂತಿಗೆ ಸೇವೆಯೊಂದಿಗೆ ದೇವರ ಭೇಟಿ ಕಾರ್ಯಕ್ರಮ, ಸಂಜೆ ೪ಕ್ಕೆ ನಿಷ್ಠಿ ದೇಶಮುಖ ಮನೆಯಿಂದ ಸ್ವರ್ಣಲೇಪಿತ ಕಳಸದ ಭವ್ಯ ಮೆರವಣಿಗೆ ನಂತರ ಶ್ರೀ ರೇವಣಸಿz್ದÉÃಶ್ವರರ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಬಳಿಕ ಶಾಲಾ ಮಕ್ಕಳಿಂದ ಲೇಜಿಮ್, ಮದ್ದು ಸುಡುವುದು, ರಾತ್ರಿ ಮಹಿಷಾಸುರ ಮರ್ಧಿನಿ ಪೌರಾಣಿಕ ಬಯಲಾಟ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಜಾತ್ರಾ ಕಮಿಟಿ ಅಧ್ಯP್ಷÀ ಮಲ್ಲಿಕಾರ್ಜುನ ಪುರದಾಳ ತಿಳಿಸಿz್ದÁರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net