ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನ ಆಚರಣೆ

mng--23 april santha anthooni
Published on

ಮಂಗಳೂರು: ನಗರದ ಜೆಪ್ಪುವಿನ ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಗಳ ಶತಮಾನೋತ್ಸವದ ರಜತ ಮಹೋತ್ಸವದ ಅಂಗವಾಗಿ ಕೃತಜ್ಞತಾ ದಿನ ಭಾನುವಾರ ಜೆಪ್ಪುವಿನ ಸಂತ ಅಂತೋನಿ ಚಾಪೆಲ್‌ನಲ್ಲಿ ಆಚರಿಸಲಾಯಿತು.


ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ಮ್ಯಾಕ್ಸಿಮ್ ಎಲ್. ನೊರೊನ್ಹಾ, ಸಂಸ್ಥೆಯ ಮೇಲೆ ತೋರಿದ ಕೃಪಾವರಗಳಿಗೆ ದೇವರಿಗೆ ಸ್ತೋತ್ರ ಸಲ್ಲಿಸಿ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು. ಸಂಸ್ಥೆಯ ಸಹಾಯಕ ನಿರ್ದೇಶಕ ಫಾ.ರೂಪೇಶ್ ತಾವ್ರೊ ಅವರು ಪ್ರವಚನ ಬೋಧಿಸಿದರು. ಮಂಗಳೂರು ಧರ್ಮಕ್ಷೇತ್ರದ ಕುಲಪತಿ ವಿಕ್ಟರ್ ಜಾರ್ಜ್ ಡಿಸೋಜ, ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ವಿಲಿಯಂ ಬಾರ್ಬೋಜಾ, ಫಾದರ್ ಲಾರೆನ್ಸ್ ಡಿಸೋಜ, ಫಾದರ್ ಫ್ರಾನ್ಸಿಸ್ ಡಿಸೋಜ, ಫಾದರ್ ತ್ರಿಶನ್ ಡಿಸೋಜ, ಸಂಸ್ಥೆಯ ನಿರ್ದೇಶಕ ಫಾದರ್ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೇಶಕ ಫಾದರ್ ಲ್ಯಾರಿ ಪಿಂಟೋ, ಮಾರ್ಸೆಲ್ ಮೊಂತೇರೊ ಮೊದಲಾದವರು ಉಪಸ್ಥಿತರಿದ್ದರು.


ಸಂಸ್ಥೆಗೆ ಸೇವೆ ಸಲ್ಲಿಸಿದ ನಿರ್ದೇಶಕರು, ಹಿತಚಿಂತಕರು, ದಾನಿಗಳು ಹಾಗೂ ಹಿತೈಷಿಗಳನ್ನು ಸನ್ಮಾನಿಸಲಾಯಿತು. ಎಲ್ಲಾ ಹಿತಚಿಂತಕರಿಗೆ ಕೃತಜ್ಞತೆಯ ಸಂಕೇತವಾಗಿ ಸಂತ ಅಂತೋನಿಯವರ ಪ್ರತಿಮೆ ಕಾಣಿಕೆ ನೀಡಲಾಯಿತು.


ನಿಸರ್ಗ ಪ್ರೇಮಿಯಾಗಿದ್ದ ಪಾದುವ ಸಂತ ಅಂತೋನಿಯವರ ಸವಿನೆನಪಿಗೆ ಸಂತ ಅಂತೋನಿ ಚಾರಿಟಿ ಸಂಸ್ಥೆಯ ಗಣ್ಯರು, ಹಿತೈಷಿಗಳು ಹಾಗೂ ವಿದ್ಯಾರ್ಥಿಗಳಿಂದ 10 ಫಲ ನೀಡುವ ಗಿಡಗಳನ್ನು ನೆಡಲಾಯಿತು. ಫಾದರ್ ಲ್ಯಾರಿ ಪಿಂಟೋ ಅವರು ಚಟುವಟಿಕೆಗಳ ಸಂಕ್ಷಿಪ್ತ ವರದಿಯನ್ನು ದಾಖಲಿಸಿದರು ಮತ್ತು ಆಶ್ರಮ ಮತ್ತು ಅದರ ನಿವಾಸಿಗಳ ಕೆಲವು ಅವಶ್ಯಕತೆಗಳು ಮತ್ತು ಅಗತ್ಯಗಳನ್ನು ಪಟ್ಟಿ ಮಾಡಿದರು.


ಫಾ.ಜೆ.ಬಿ. ಕ್ರಾಸ್ತಾ ಸ್ವಾಗತಿಸಿ, ಫಾದರ್ ರೂಪೇಶ್ ತಾವ್ರೊ ವಂದಿಸಿದರು. ಫಾದರ್ ತ್ರಿಶಾನ್ ಡಿಸೋಜಾ ಪ್ರಾರ್ಥನೆ ಮಾಡಿದರು. ಸೈಮನ್ ಪಾಯ್ಸ, ಬಜಾಲ್ ಮತ್ತು ತಂಡದಿಂದ ಬಲಿಪ್ರಜೆಯ ಗಾಯನ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net