ಜೆಪ್ಪುವಿನಲ್ಲಿ ಸರಣಿ ಅಪಘಾತ- ಕಾರು ಚಾಲಕ ತೀವ್ರ ಗಾಯ

IMG-20230909-WA0170
Published on

ಮಂಗಳೂರು: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 66 ಜೆಪ್ಪುವಿನ ಸಂಚಾರಿ ಪೊಲೀಸ್ ಠಾಣೆ ಸಮೀಪ ಶನಿವಾರ ಕಾರು, ಲಾರಿ, ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ನಜ್ಜುಗುಜ್ಜಾಗಿರುವ ಕಾರಿನೊಳಗೆ ಸಿಲುಕಿರುವ ಚಾಲಕ ತೊಕ್ಕೋಟಿನ ದಿನೇಶ್ ತೀವ್ರ ಗಾಯಗೊಂಡಿದ್ದಾರೆ.
ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾರೆ. ಪರಿಣಾಮ ಹಿಂಬದಿಯಲ್ಲಿದ್ದ ಲಾರಿ ತಕ್ಷಣ ನಿಂತಿದೆ. ಅದರ ಹಿಂದಿದ್ದ ಮತ್ತೊಂದು ಕಾರು ಲಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಕಾರಿನ ಹಿಂದೆ ಬರುತ್ತಿದ್ದ ಬಸ್ ಸಿನಿಮೀಯ ರೀತಿಯಲ್ಲಿ ಕಾರಿನ ಮೇಲೆ ಏರಿ ಹೋಗಿದೆ.
ಲಾರಿ ಹಾಗೂ ಬಸ್ ನಡುವೆ ಸಿಲುಕಿ ಅಪ್ಪಚ್ಚಿಯಾದ ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಅವರು ತೀವ್ರ ಜಖಂಗೊಂಡಿದ್ದಾರೆ ಎನ್ನುವುದು ಪ್ರಾಥಮಿಕ ಮಾಹಿತಿ. ಅಪಘಾತಗೊಂಡ ಇತರ ವಾಹನಗಳಲ್ಲಿದ್ದ ಐದು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತೀವ್ರ ಗಾಯಗೊಂಡಿರುವ ಕಾರು ಚಾಲಕನನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಮತ್ತು ಇತರ ವಾಹನ ಸವಾರರು ನೆರವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net