

ಅರಸೀಕೆರೆ : ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವಿ
ಧ್ಯಕ್ತ ಚಾಲನೆ ದೊರೆಯಿತು. ಸಂಪ್ರದಾಯದಂತೆ ಮದುವಣಿಗೆ ಶಾಸ್ತ್ರ ನಡೆಸಿದ ಗ್ರಾಮಸ್ಥರು ಬೀದಿ ಬೀದಿಯಲ್ಲಿ
ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದ ಸರ್ವಾಲಂಕೃತ ಬೆಳ್ಳಿ ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತು ಭಕ್ತಿ ಭಾವದಿಂದ ಮೆರವಣಿಗೆ ನಡೆಸಿದರು. ದೇವರ ಅಗಮನಕ್ಕೆ ಊರಿಗೆ ಊರೇ ಸಿಂಗಾರ ಗೊಂಡಿತ್ತು. ಭಕ್ತರು ಗ್ರಾಮವನ್ನು ತಳಿರು- ತೋರಣಗಳಿಂದ ಅಲಂಕರಿಸಿದ್ದರು. ಸುಮಂಗಲಿಯರು ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿದ್ದರು. ಹಣ್ಣು, ಕಾಯಿ ಮಂಗಳಾರತಿ ತಂದು ನೈವೇದ್ಯ ಮಾಡಿಸಿದ್ದು ವಿಶೇಷವಾಗಿತ್ತು. ಸುಕ್ಷೇತ್ರ ಯಾದಾಪುರದಲ್ಲಿ ಮಂಗಳವಾರ ರಾತ್ರಿ ಕೆಂಡೋತ್ಸವ, ಚಂದ್ರಮಂಡಲ, ಸೂರ್ಯ ಮಂಡಲೋತ್ಸವ ಸೇರಿದಂತೆ ಬಗೆಗೆ ಬಗೆಯ ಉತ್ಸವಗಳು ನೆರವೇರಿದವು. ನೂರಾರು ಭಕ್ತರು ಭಾಗವಹಿಸಿದ್ದರು.