ಯಕ್ಷಗಾನ ಕಲಾರಂಗ ವಿಭಿನ್ನ, ವಿಶಿಷ್ಟ ಸಂಸ್ಥೆ...

Vidya Lead
Published on

ಡಾ. ನಿ.ಬೀ. ವಿಜಯ್​ ಬಲ್ಲಾಳ ಶ್ಲಾಘನೆ

ಜೀವನ ವಿದ್ಯಾ ಸನಿವಾಸ ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯ ಯಕ್ಷಗಾನ ಕಲಾರಂಗವು ಯಕ್ಷಗಾನ ಕಲೆಗಾಗಿ ಸ್ಥಾಪನೆಗೊಂಡಿದ್ದರೂ ಸಹ ಶಿಕ್ಷಣ, ಕಲಾವಿದರ ಕ್ಷೇಮಚಿಂತನೆ, ಯಕ್ಷಶಿಕ್ಷಣದೊಂದಿಗೆ ಸಾಮಾಜಿಕವಾಗಿ ಕೆಲಸ ಮಾಡುತ್ತಿರುವ ವಿಭಿನ್ನ ಸಂಸ್ಥೆ. ವಿದ್ಯಾಪೋಷಕ್​ ಯೋಜನೆ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದೆ ಎಂದು ಅಂಬಲಪಾಡಿಯ ಜನಾರ್ದನ-ಮಹಾಕಾಳಿ ದೇವಾಲಯದ ಧರ್ಮದರ್ಶಿ ಡಾ. ನಿ.ಬೀ. ವಿಜಯ್​ ಬಲ್ಲಾಳ ಶ್ಲಾಘಿಸಿದರು.

Vidya 2
ಉಡುಪಿಯ ಕಲಾರಂಗದ ಐವೈಸಿ ಸಭಾಭವನದಲ್ಲಿ ವಿದ್ಯಾಪೋಷಕ್​ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಐದು ದಿನಗಳ ಜೀವನ ವಿದ್ಯಾ ಎಂಬ ಸನಿವಾಸ ಶಿಬಿರವನ್ನು ಫೆ.27ರಂದು ಉದ್ಘಾಟಿಸಿ ಮಾತನಾಡಿದರು.

ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ್​ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವರಿಷ್ಠ ಡಾ. ಸುಧಾಕರ್​ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಶ್ರೀನಿವಾಸ್​ ಪ್ರಭು, ಯು.ವಿಶ್ವನಾಥ್​ ಶೆಣೈ, ಶಿಬಿರದ ನಿರ್ದೇಶಕ ಗುರುದತ್​ ಬಂಟ್ವಾಳಕರ್​, ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್​ ರಾವ್​, ಕೋಶಾಧಿಕಾರಿ ಪ್ರೊ. ಕೆ.ಸದಾಶಿವ್​ ರಾವ್​ ಉಪಸ್ಥಿತರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ್​ ಎಂ. ವಂದಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಎಚ್​.ಎನ್​. ಶೃಂಗೇಶ್ವರ ಸಹಕರಿಸಿದರು.

ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್​ನ 230 ವಿದ್ಯಾರ್ಥಿಗಳಿಗೆ ಮಂಗಳೂರಿನ ಪ್ರೊಟೊ ಅಪ್​ ಸ್ಕಿಲ್​ನ ನಿರ್ದೇಶನದಲ್ಲಿ ಐದು ದಿನಗಳ ಸನಿವಾಸ ಶಿಬಿರ ನಡೆಯಲಿದೆ. ಮಕ್ಕಳಲ್ಲಿ ಆತ್ಮಸ್ಥೈರ್ಯ, ಜೀವನ ಕೌಶಲ, ಆಂಗ್ಲಭಾಷಾ ಪ್ರೌಢಿಮೆ ಬೆಳೆಸಲಾಗುವುದು. ಸಾಧಕ ವ್ಯಕ್ತಿಗಳ ಪರಿಚಯದೊಂದಿಗೆ ಜೀವನ ಮೌಲ್ಯಗಳನ್ನೂ ಕಲಿಸಲಾಗುವುದು. | ಎಂ.ಗಂಗಾಧರ್​ ರಾವ್​. ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net