ಧರ್ಮ ಮಾರ್ಗದಿಂದ ಸಾರ್ಥಕ ಬದುಕು

22 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬದುಕು ಸಾರ್ಥಕವಾಗಲು ಸಂಯಮ, ವಿಧೇಯತೆ, ಸಮಾಜಸೇವೆ, ಸದ್ಭಾವನೆ ಅವಶ್ಯ. ಧರ್ಮ ಮಾರ್ಗದಿಂದ ಸಾರ್ಥಕ ಬದುಕು ಸಾಧ್ಯ ಎಂದು ಆಕಾಶವಾಣಿಯ ನಿವೃತ್ತ ಹಿರಿಯ ಉದ್ಘೋಷಕ ಶಶಿಧರ ನರೇಂದ್ರ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಸಹಾಯಕ ಆಯುಕ್ತ ಸಿ.ಆರ್. ಪಾಟೀಲ ಅವರ ಹಿಂದಿ ಅನುವಾದಿತ `ಜೀವನ ದರ್ಶನ' ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಡಾ. ವಿ.ಕೆ. ಗೋಕಾಕ ರಚಿತ `ಜೀವನ ಪಾಠಗಳು' ಮೂಲಕೃತಿಯಲ್ಲಿ ಬಾಳಿಗೆ ಬೆಳಕು ತೋರುವ ಬರಹಗಳಿವೆ ಎಂದರು.

ಅನುವಾದಕ ಸಿ.ಆರ್. ಪಾಟೀಲ ಅವರು ಮಾನವನ ಕರ್ತವ್ಯ ಮತ್ತು ಗ್ರಂಥದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ವಾಣಿಜ್ಯ ತೆರಿಗೆ ಅಽಕಾರಿಯಾಗಿ ಸಾಹಿತ್ಯದ ಬಗ್ಗೆ ಹುಟ್ಟಿದ ಅಭಿರುಚಿ ಮತ್ತು ಅನುಭವ ಹಂಚಿಕೊ0ಡರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗುರು ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕ ಡಾ. ಟಿ.ಆರ್. ಭಟ್ ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net