

ಬೆಳಗಾವಿ: ಜೈನ ಸಮುದಾಯದ ಅಭಿವೃದ್ಧಿಗೆ ಸಮಾಜಮುಖಿ ಕಾರ್ಯ ಮಾಡುತ್ತಿರುವ ಜಿತೋ ಸಂಸ್ಥೆಯ ಕಾರ್ಯ ಶ್ಲಾನೀಯವಾಗಿದೆ ಎಂದು ರಾಜ್ಯ ಅರಣ್ಯ ಕೈಗಾರಿಕೆಗಳ ನಿಗಮದ ಉಪ ಸಂರಣಾಧಿಕಾರಿ ಮಲ್ಲಿನಾಥ ಕುಸನಾಳೆ ಹೇಳಿದರು.
ಈಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಝೇಶನ್ ಜಿತೋ ಸಂಸ್ಥೆಯ 19ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟನೆ ಹಾಗೂ ವಿವಿಧ ವಿಭಾಗಗಳಲ್ಲಿನ ಸಾಧಕರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೈನ ಸಮುದಾಯದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಶೈಣಿಕ ನೆರವು ನೀಡುತ್ತಿರುವುದು ಹರ್ಷದ ಸಂಗತಿ. ವ್ಯಾಪಾರ ಉದ್ಯೋಗದ ಜತೆಗೆ ಸಾಮಾಜಿಕ ಕಳಕಳಿ ಹೊಂದಿದ ಸಂಸ್ಥೆಯು ಇನ್ನಷು ಬೆಳೆಯಲಿ ಎಂದು ಹಾರೈಸಿದರು.
ಕೆಕೆಜಿ ವಲಯದ ಉಪಾಧ್ಯ ಸಂತೋಷ ಪೋರವಾಲ ಮತ್ತು ಜಿತೋ ಅೆಕ್ಸ್ ಅಲ್ಪಸಂಖ್ಯಾತರ ವಿಭಾಗದ ಪ್ರಭಾರ ನಿರ್ದೇಶಕ ಪುಷ್ಪಕ ಹನಮಣ್ಣವರ ಮಾತನಾಡಿ, ಸಮುದಾಯದವರು ಜಿತೋ ಸಂಸ್ಥೆಯ ಪ್ರಯೋಜನ ಪಡೆಯಬೇಕೆಂದರು.
ವಿವಿಧ ೇತ್ರಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳಾ ಉದ್ಯಮಿ ವಿಭಾಗದಲ್ಲಿ ಟಿನಾ ಜೈನ, ಅತ್ಯುತ್ತಮ ವೃತ್ತಿಪರ ವಿಭಾಗದಲ್ಲಿ ಅಭಿಯಂತ ಬಾಹುಬಲಿ ಗಡಕರಿ, ಅತ್ಯುತ್ತಮ ಸಮಾಜ ಸೇವೆ ವಿಭಾಗದಲ್ಲಿ ವಕೀಲ ರವಿರಾಜ ಪಾಟೀಲ, ಅತ್ಯುತ್ತಮ ಶಿಣ ಸಂಸ್ಥೆಯ ವಿಭಾಗದಲ್ಲಿ ಲಕ್ಷಿ$್ಮಸೇನ ಎಜುಕೇಶನ್ ಸೊಸೈಟಿ ರಾಯಬಾಗ, ಅತ್ಯುತ್ತಮ ಉದ್ಯೋಗ ಟಕದ ವಿಭಾಗದಲ್ಲಿ ಜಿನಾ ಸ್ಪೇಷಲ್ ಸ್ಟೀಲ್ ವರ್ಕ್ಸ್ ಪೆ.ಲಿ. ಹಾಗೂ ಅತ್ಯುತ್ತಮ ಕೃಷಿಕ ವಿಭಾಗದಲ್ಲಿ ಸುರೇಂದ್ರ ಕುಸನಾಳೆ ಉಗಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿತೋ ಲೇಡಿಜ್ ವಿಂಗ್ ವತಿಯಿಂದ ಎರಡು ಕುಟುಂಬಗಳಿಗೆ ಎರಡು ಹೊಲಿಗೆ ಯಂತ್ರ ವಿತರಿಸಲಾಯಿತು.
ಕಾರ್ಯಕ್ರಮ ಸಂಯೋಜಕ ವಿಜಯ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ವಿಕ್ರಮ ಜೈನ ಪರಿಚಯಿಸಿದರು. ಜಿತೋ ಅಧ್ಯ ಹರ್ಷವಧನ ಇಂಚಲ ಸ್ವಾಗತಿಸಿದರು. ಪ್ರಾಪ್ತಿ ಪಾಟೀಲ ನಿರೂಪಿಸಿದರು. ಜಿತೋ ಮುಖ್ಯ ಕಾರ್ಯದರ್ಶಿ ಅಭಯ ಆದಿಮನಿ ವಂದಿಸಿದರು.