ಜೀತ ಪದ್ಧತಿ ನಿಮೂರ್ಲನಾ ದಿನಾಚರಣೆ

New Jeeta paddhati new news
Published on

ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ಆಡಳಿತ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರದಂದು ಜೀತ ಪದ್ಧತಿ ನಿಮೂರ್ಲನಾ ದಿನಾಚರಣೆ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಕಾನೂನು ಸೇವಾ ಸಮಿತಿಯ ಪ್ರಧಾನ ದಿವಾಣಿ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ಜೀತ ಪದ್ದತಿಯು ಕಾನೂನು ಬಾಹಿರ ಚಟುವಟಿಕೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ಹುಬ್ಬಳ್ಳಿ ನಗರ ತಹಸೀಲ್ದಾರ ಕಲಗೌಡ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಲೂಕು 2ನೇ ನ್ಯಾಯಾಲಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕರ್ಣಸಿಂಗ್ ಆರ್.ಯು, ಧಾರವಾಡ ವಿಭಾಗದ ಸಹಾಯಕ ಕಾರ್ವಿುಕ ಆಯುಕ್ತರಾದ ಎಸ್. ಶ್ವೇತಾ, ಹುಬ್ಬಳ್ಳಿ 2ನೇ ವೃತ್ತದ ಹಿರಿಯ ಕಾರ್ವಿುಕ ನಿರೀಕ್ಷಕ ಅಕ್ರಮ್ ಅಲ್ಲಾಪುರ, ಹುಬ್ಬಳ್ಳಿ 3ನೇ ವೃತ್ತದ ಹಿರಿಯ ಕಾರ್ವಿುಕ ನಿರೀಕ್ಷಕ ಅಶೋಕ ಒಡೆಯರ್, ಮಾರ್ವಲ್ ಪ್ರಾಪಟೀಸ್ ಕನ್ಸಟ್ರಕ್ಷನ್ ಸೈಟ್ ಕಾರ್ಯಾಚರಣೆಯ ಮುಖ್ಯಸ್ಥ ರಘರಾಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net